ಗೋಣಿಕೊಪ್ಪಲು, ಏ. 21: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮಜ್ದಾ ಲಾರಿಯನ್ನು ವಶಪಡಿಸಿ ಕೊಂಡಿರುವ ಪೊನ್ನಂಪೇಟೆ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಪೊನ್ನಂಪೇಟೆ ಠಾಣಾಧಿಕಾರಿ ಡಿ. ಕುಮಾರ್ ಹಾಗೂ ತಂಡ ರಾತ್ರಿ ವೇಳೆಯಲ್ಲಿ ಗಸ್ತು ತಿರುಗುವಿಕೆ ಸಂದರ್ಭ ಕೊಟ್ಟಗೇರಿ, ಬಾಳೆಲೆ ಮಾರ್ಗವಾಗಿ ಆಗಮಿಸಿದ (ಎ12.ಎ1125) ಮಜ್ದಾ ವ್ಯಾನ್ ಅನ್ನು ತಡೆದು ಪರಿಶೀಲನೆ ನಡೆಸಿದ ಸಂದರ್ಭ ಚಾಲಕ ವ್ಯಾನ್ ಅನ್ನು ಬಿಟ್ಟು ಕತ್ತಲೆಯಲ್ಲಿ ಪರಾರಿಯಾಗಿದ್ದಾನೆ. ಡಿವೈಎಸ್ ಪಿ. ಜಯಕುಮಾರ್, ಸಿಪಿಐ ರಾಮರೆಡ್ಡಿ ಮಾರ್ಗದರ್ಶನದಲ್ಲಿ ಎಸ್.ಐ. ಡಿ. ಕುಮಾರ್ ಮರಳು ತುಂಬಿದ ವ್ಯಾನ್ ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಎಎಸ್ಐ ವೆಂಕಟೇಶ, ಸಿಬ್ಬಂದಿಗಳಾದ ಸುಬ್ರಮಣ್ಯ, ಸತೀಶ್, ಬೀಮಜ್ಜ ಮುಂತಾದವರು ಹಾಜರಿದ್ದರು.
- ಹೆಚ್.ಕೆ.ಜಗದೀಶ್.