ಮಡಿಕೇರಿ, ಏ. 21: ಬಿಪಿಎಲ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿ ವಿಲೇವಾರಿಗೆ ಬಾಕಿ ಇರುವ ಫಲಾನುಭವಿಗಳಿಗೂ ಸರ್ಕಾರವು ಉಚಿತ 10 ಕೆ.ಜಿ ಅಕ್ಕಿ ನೀಡಲು ತೀರ್ಮಾನಿಸಿದ್ದು ಅದರಂತೆ ಸಂಬಂಧಪಟ್ಟ ಫಲಾನುಭವಿಗಳು ತಾ. 24ರ ಒಳಗಾಗಿ ತಮ್ಮ ಹತ್ತಿರದ ಅಥವಾ ಇತರ ನ್ಯಾಯಬೆಲೆ ಅಂಗಡಿಯಲ್ಲಿ ಏಪ್ರಿಲ್ ತಿಂಗಳ ಪಡಿತರವನ್ನು ಪಡೆದುಕೊಳ್ಳಬಹುದಾಗಿ ಫಲಾನುಭವಿಗಳ ವಿವರ ಈಗಾಗಲೇ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲೂ ಲಭ್ಯವಿದೆ.
ಬಿಪಿಎಲ್ ಕಾರ್ಡ್ಗಾಗಿ ಅರ್ಜಿ ಹಾಕಿ ವಿಲೇವಾರಿಯಾಗಲು ಬಾಕಿ ಇರುವ ಅರ್ಜಿದಾರರು ತಾ. 24ರ ಒಳಗಾಗಿ ತಮ್ಮ ಸಮೀಪದ ಅಥವಾ ಯಾವುದಾದರೂ ಒಂದು ನ್ಯಾಯಬೆಲೆ ಅಂಗಡಿಯಲ್ಲಿ ಏಪ್ರಿಲ್ ತಿಂಗಳ ಪಡಿತರ (ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತವಾಗಿ)ವನ್ನು ಪಡೆದುಕೊಳ್ಳ ಬಹುದಾಗಿದೆ.
ನ್ಯಾಯಬೆಲೆ ಅಂಗಡಿಗೆ ಹೋಗುವಾಗ ತಮ್ಮ ಂಠಿಠಿಟiಛಿಚಿಣioಟಿ ಓumbeಡಿ ಹಾಗೂ ಂಚಿಜhಚಿಚಿಡಿ ಅಚಿಡಿಜನ್ನು ಕಡ್ಡಾಯವಾಗಿ ತೆಗೆದು ಕೊಂಡು ಹೋಗಬೇಕು. ಜೊತೆಗೆ ತಮ್ಮ ಕುಟುಂಬದ ಯಾವುದಾದರೂ ಒಂದು ಮೊಬೈಲ್ ಅನ್ನು ತೆಗೆದುಕೊಂಡು ಹೋಗಿ. ಇದರಿಂದ ವಿತರಣೆಗೆ ಸಹಕಾರಿಯಾಗಲಿದೆ ಎಂದು ತಹಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.