ಪಾಲಿಬೆಟ್ಟ, ಏ. 21: ಇದೀಗ ಕೊರೊನಾ ಮುಕ್ತ ಜಿಲ್ಲೆಯಾಗಿದ್ದು, ಹತೋಟಿಗೆ ತರಲು ಶ್ರಮಿಸಿದ ಜಿಲ್ಲಾಡಳಿತದ ಕಾರ್ಯಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಮುಖಂಡ ವಿಜು ಸುಬ್ರಮಣಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಾಲಿಬೆಟ್ಟ ಗ್ರಾಮದಲ್ಲಿ ಆಸ್ಪತ್ರೆ ಸಿಬ್ಬಂದಿಗಳು, ಪೆÇಲೀಸ್ ಸಿಬ್ಬಂದಿಗಳು, ಆಟೋ ಚಾಲಕರು ಹಾಗೂ ಸಾರ್ವಜನಿಕರಿಗೆ 2000 ಮಾಸ್ಕ್ಗಳನ್ನು ಪಾಲಿಬೆಟ್ಟ ಉಪ ಠಾಣೆಯ ಮುಂಭಾಗ ಉಚಿತವಾಗಿ ವಿತರಣೆ ಮಾಡಿದರು.
ಮಹಾಮಾರಿ ಕೊರೊನಾ ವೈರಸ್ ನಿರ್ಮೂಲನೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭ ಉಪಠಾಣೆಯ ಮುಖ್ಯಪೇದೆ ಯೋಗೇಶ್, ಪಾಲಿಬೆಟ್ಟ ಆಟೋ ಚಾಲಕ ಸಂಘದ ಅಧ್ಯಕ್ಷ ದೂಜಾ ವೇಗಸ್, ಉಪಾಧ್ಯಕ್ಷ ರಾಜಪ್ಪ, ಕಾರ್ಯದರ್ಶಿ ನಾರಾಯಣ, ಸ್ಥಳೀಯರಾದ ಟಿ.ಜೆ. ವಿಜೇಶ್ ಸೇರಿದಂತೆ ಮತ್ತಿತರರು ಇದ್ದರು.
ವರದಿ: ಪುತ್ತಂ ಪ್ರದೀಪ್