ಮಡಿಕೇರಿ, ಏ. 21: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆನಂದ ಎಂಬ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಲಾಗಿದೆ.

ಲೈನ್‍ಮನೆಯೊಂದರಲ್ಲಿ ವಾಸವಾಗಿದ್ದ ಕಾರ್ಮಿಕ ಮಹಿಳೆ ರೇಷನ್ ಕಾರ್ಡ್ ತರಲೆಂದು ರಾಯಚೂರಿಗೆ ಹೋಗಿದ್ದು; ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಆನಂದ ಎಂಬವರ ಮನೆಯಲ್ಲಿ ಇರಿಸಿದ್ದರು. ಲಾಕ್‍ಡೌನ್ ಹಿನ್ನೆಲೆ ಮಹಿಳೆ ಹಿಂತೆರಳಲು ಆಗಲಿಲ್ಲ.ಸುಮಾರು 10 ದಿನಗಳಿಂದ ಆನಂದ ಈ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುತ್ತಾನೆ. ಪೋಕ್ಸೋ ಕಾಯ್ದೆ ಅಡಿ ಹಾಗೂ ಲೈಂಗಿಕದೌರ್ಜನ್ಯ ಕಾಲಂ ಅಡಿ ಆನಂದನ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿ ಆನಂದ ಕಡಗದಾಳುವಿನ ನಿವಾಸಿಯಾಗಿದ್ದಾನೆ.