ವೀರಾಜಪೇಟೆ, ಏ. 21 : ಇಂದು ಬೆಳಿಗ್ಗೆ ಬೆಂಗಳೂರಿಗೆ ತೆರಳಲು ಇಲ್ಲಿನ ದೊಡ್ಡಟ್ಟಿ ಚೌಕಿ ಬಳಿಯ ವಸತಿ ಗೃಹದ ಮುಂದೆ ಕಾಯುತ್ತಿದ್ದ ಯುವತಿಯನ್ನು ಪೊಲೀಸರು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದು, ನಂತರ ವೈದ್ಯರು ತಪಾಸಣೆಗೊಳಪಡಿಸಿ ಮುಂದಿನ ಕ್ರಮಕ್ಕಾಗಿ ಮಡಿಕೇರಿಯ ಆರೋಗ್ಯ ತಂಡಕ್ಕೆ ಕಳುಹಿಸಲಾಗಿದೆ.
ಮಡಿಕೇರಿ ಬಳಿಯ ಅಯ್ಯಂಗೇರಿಯ ನಿವಾಸಿಯಾಗಿರುವ ಯುವತಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯಿಂದ ಮನೆಗೆ ಬಂದಿರುವುದಾಗಿ ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.