ಭೂಮಿಯ ಮೇಲಿನ ಮಿತಿಯಿಲ್ಲದ ಅತಿಯಾದ ಮಾನವನ ಹಸ್ತಕ್ಷೇಪದ ಪರಿಣಾಮ ನಮ್ಮನ್ನೆಲ್ಲಾ ಹೊತ್ತು ನಿಂತ ವಸುಂಧರೆ ಭೂಮಿ ವಿನಾಶದ ಅಂಚಿಗೆ ತೆರಳುತ್ತಿದೆಯೇ? ಎಂಬ ಭಯ, ಮಿಶ್ರಿತ ಆತಂಕ ಇತ್ತೀಚಿನ ವರ್ಷ ಗಳಿಂದ ಎಲ್ಲರಲ್ಲೂ ಮನೆ ಮಾಡಿದೆ... ಮಾಡುತ್ತಿದೆ. ಭೂಮಿಯನ್ನು ಗುಬ್ಬಚ್ಚಿ ಗೂಡಿನಂತೆ ರಕ್ಷಿಸುತ್ತಿದ್ದ ಓಜೋನ್ ಎಂಬ ರಕ್ಷಣಾ ಪದರ ಹಾಳಾಗಿರುವುದೇ ತಾಪಮಾನ ಹೆಚ್ಚಾಗಲು ಕಾರಣವಾಗಿದೆ. ಭೂಮಿಯಿಂದ ಸುಮಾರು 15 ರಿಂದ 35 ಕಿ.ಮೀ. ವ್ಯಾಪ್ತಿಯಲ್ಲಿ ಓಜೋನ್ ಪದರ ನಿರ್ಮಾಣಗೊಂಡಿರುತ್ತದೆ. ಇಲ್ಲಿ ಏರೋಸಾಲ್ಸ್ ಗಳು, ಸಾರಜನಕ, ಆಮ್ಲಜನಕ, ಸಣ್ಣ ಧೂಳಿನ ಕಣಗಳು, ಉಪಯುಕ್ತ ಅನಿಲಗಳು ಶೇಖರಣೆ ಯಾಗಿರುತ್ತವೆ. ಈ ಓಜೋನ್ ಪದರದಲ್ಲಿರುವ ಏರೋಸಾಲ್ಸ್ ಮತ್ತು ಧೂಳಿನ ಕಣಗಳು ಶೇ.32 ಪ್ರತಿಶತ ಬೆಳಕಿನ ತೀವ್ರತೆಯನ್ನು ತಡೆಗಟ್ಟುತ್ತವೆ. ಹಾಗೆಯೇ ಸಾರಜನಕ, ಆಮ್ಲಜನಕ, ಗಾಳಿಯ ಜೊತೆ ಸಂಚರಿಸುವ ಸಣ್ಣ ಸಣ್ಣ ಕಣಗಳು ಹಾಗೂ ತೇವಾಂಶವು ಶೇ. 5 ರಿಂದ ಶೇ. 8 ರಷ್ಟು ಬೆಳಕಿನ ತೀವ್ರತೆಯನ್ನು ತಡೆಗಟ್ಟುತ್ತದೆ. ಈ ಕ್ರಿಯೆಯಿಂದ ತೀವ್ರವಾದ ಬೆಳಕು ಹಿಂದಕ್ಕೆ ಪ್ರತಿಫಲನವಾಗುತ್ತದೆ. ಜೊತೆಗೆ ಓಜೋನ್ ಪದರವು ಯು.ವಿ ಬೆಳಕಿನ ಕಿರಣವನ್ನು ಹೀರಿಕೊಂಡು ಭೂಮಿಯ ಮೇಲೆ ಉಸಿರಾಡುವ ಜೀವ ಸಂಕುಲವನ್ನು ಕಾಪಾಡುತ್ತದೆ. ಆದರೆ ಇಂದು ಏನಾಗಿದೆ ? ಏನಾಗುತ್ತಿದೆ? ಓಜೋನ್ ಪದರ ಶೇ.13 ರ್ಸÀ್ಟು ಹಾಳಾಗಿದೆ. ಇದರಿಂದಾಗಿ ತೀವ್ರವಾದ ಬೆಳಕು ಭೂಮಿಗೆ ನೇರವಾಗಿ ಧಾಳಿ ಇಡುತ್ತಿದೆ. ಹೀಗಾಗಿಯೇ ನಾವು ಹಿಂದೆಂದೂ ಕಾಣದ ತಾಪಮಾನ ವನ್ನು ಅನುಭವಿಸುತ್ತಿದ್ದೇವೆ. ಹಿಮಗಡ್ಡೆಗಳು ಕರಗಿ ನೀರಾಗುತ್ತಿವೆ. ಸಮುದ್ರದ ನೀರು ಸರಾಸರಿಗಿಂತ ಹೆಚ್ಚು ಆವಿಯಾಗುತ್ತಿದೆ. ಇದರ ಪರಿಣಾಮ ಬಿಸಿ ಗಾಳಿ ಬೀಸುತ್ತದೆ. ಇದರಿಂದಾಗಿಯೇ ಈಗಾಗಲೇ ಹಲವು ಜಾತಿಯ ಪ್ರಾಣಿ - ಪಕ್ಷಿ ಪ್ರಬೇಧಗಳು ನಶಿಸಿವೆ. ಇನ್ನೂ ನಶಿಸುತ್ತಲೇ ಇವೆ. ಈ ಅನಾಹುತಗಳಿಗೆ ತಜ್ಞರ ಪ್ರಕಾರ, ಆಧುನಿಕ ಜೀವನ ಶೈಲಿಗಾಗಿ ನಾವು ತಯಾರಿಸುತ್ತಿರುವ ವಸ್ತುಗಳಿಂದ ಬಿಡುಗಡೆಯಾಗುತ್ತಿರುವ ಕಾರ್ಬನ್ ಡೈ ಆಕ್ಸೈಡ್ ಹಾಗೂ ವಿಷ ಅನಿಲಗಳು ಮುಖ್ಯ ಕಾರಣ. ಮನುಷ್ಯನ ಹಸ್ತಕ್ಷೇಪ ಇಲ್ಲದಿದ್ದಲ್ಲಿ ಪ್ರಕೃತಿ ತನ್ನ ಸಮತೋಲನವನ್ನು ಪ್ರತೀ ಕ್ಷಣವೂ ತಾನೇ ಕಾಪಾಡಿಕೊಳ್ಳುತ್ತಿರುತ್ತದೆ. ಪ್ರಕೃತಿ ಮುನಿಸು ಹೆಚ್ಚಾಗಿ ಕಳೆದ ಎರಡೂ ವ್ಸರ್Àಗಳಲ್ಲಿ ಕೇರಳ ಹಾಗೂ ಕೊಡಗಿನಲ್ಲಿ ಆದಂತಹ ಜಲಪ್ರಳಯ, ಬೆಟ್ಟ ಗುಡ್ಡ ಕುಸಿತಗಳ ಪ್ರಮಾಣ ಹೆಚ್ಚಾಗುತ್ತದೆ ಎಂಬ ವಿಜ್ಞಾನಿಗಳ ಹೇಳಿಕೆಯನ್ನು ನಾವು ಇನ್ನಾದರೂ ಗಂಭೀರವಾಗಿ ತೆಗೆದು ಕೊಳ್ಳಲೇಬೇಕಿದೆ. ಹಾಗಾಗಿ ಪ್ರಕೃತಿ ಮಾತೆ ಎಂಬ ಭೂಮಿ ತಾಯಿ ಯನ್ನು ನಾವೆಲ್ಲರೂ ಇನ್ನಾ ದರೂ ಮತ್ತು ಈಗಲಾದರೂ ಜೋಪಾನ ದಿಂದ ಕಾಪಾಡಿಕೊಳ್ಳಬೇಕಿದೆ. ಭೂಮಿಯ ಮೇಲಿನ ನಮ್ಮ ಅಪರಾಧಗಳ ನ್ನು ಸರಿಪಡಿಸಿ ಕೊಳ್ಳಬೇಕಿದೆ.
- ಕೆ.ಎಸ್. ಮೂರ್ತಿ