ಶನಿವಾರಸಂತೆ, ಏ. 21: ಲಾಕ್‍ಡೌನ್ ಹಿನ್ನೆಲೆ ಶನಿವಾರಸಂತೆ ಪಟ್ಟಣದಲ್ಲಿ ವಿನಾಃಕಾರಣ ಮೋಟಾರ್ ಸೈಕಲ್, ಸ್ಕೂಟರ್, ಕಾರು ಇತರ ವಾಹನಗಳ ತಿರುಗಾಟಕ್ಕೆ ಪೊಲೀಸರು ಕಡಿವಾಣ ಹಾಕಿದ್ದಾರೆ.

ಶನಿವಾರಸಂತೆ ಪಟ್ಟಣದಲ್ಲಿ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿರುವುದರಿಂದ ಯಸಳೂರು, ಚಂಗಡಹಳ್ಳಿಯಿಂದ ಆಗಮಿಸಿದ ವ್ಯಕ್ತಿಗಳು ಹಾಗೂ ಇಲ್ಲಿನ ಕೆಲವು ಯುವಕರು ತಮ್ಮ ವಾಹನಗಳನ್ನು ದುಂಡಳ್ಳಿ ಗ್ರಾ.ಪಂ. ಕಚೇರಿ ಮುಂಭಾಗದಲ್ಲಿರುವ ತ್ಯಾಗರಾಜ ಕಾಲನಿ ರಸ್ತೆಯಲ್ಲಿ ಸಾಗುತ್ತಾರೆ ಎಂಬ ಕಾರಣಕ್ಕಾಗಿ ತ್ಯಾಗರಾಜಕಾಲನಿಯ ಯುವಕರು ಕಾಲನಿಯ ರಸ್ತೆಗೆ ಸೈಜು ಕಲ್ಲುಗಳನ್ನು ಹಾಕಿ ತಡೆ ಮಾಡಿರುತ್ತಾರೆ.