ಮಡಿಕೇರಿ, ಏ. 20: ನಗರದ ವಿವಿಧೆಡೆ ತರಕಾರಿ ವ್ಯಾಪಾರ ಮಾಡುತ್ತಿರುವವರ ಆರೋಗ್ಯದ ತಪಾಸಣೆ ಇಂದು ನಡೆಯಿತು. ನಿನ್ನೆ ದಿನ ಜಿಲ್ಲಾಧಿಕಾರಿಯವರು ಈ ಬಗ್ಗೆ ಆರೋಗ್ಯ ಇಲಾಖೆಯವರಿಗೆ ಸೂಚಿಸಿ ಚೇಂಬರ್ ಆಫ್ ಕಾಮರ್ಸ್ಗೂ ಜವಾಬ್ದಾರಿ ನೀಡಿದ್ದರು. ಚೇಂಬರ್ ವತಿಯಿಂದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೋಂತಿ ಗಣೇಶ್ ಅವರನ್ನು ಸಂಯೋಜನೆಗೆ ನೇಮಕ ಮಾಡಿತ್ತು. ಇಂದು ಇವರ ನೇತೃತ್ವದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ 90 ವ್ಯಾಪಾರಸ್ಥರ ಆರೋಗ್ಯ ತಪಾಸಣೆ ನಡೆಯಿತು. ಎಲ್ಲಾ ವ್ಯಾಪಾರಿಗಳೂ ಕಡ್ಡಾಯವಾಗಿ ತಪಾಸಣೆಗೆ ಒಳಗಾಗುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇಂದು ತಪಾಸಣೆ ಮಾಡಿರುವ ವ್ಯಾಪಾರಿಗಳಿಗೆ ಈ ಬಗ್ಗೆ ಕಾರ್ಡು ನೀಡಲು ನಗರ ಚೇಂಬರ್ ತೀರ್ಮಾನಿಸಿದ್ದು; ಅಂತಹವರ ಗುರುತಿ ಸುವಿಕೆಗೆ ಅದು ಸಹಕಾರಿಯಾಗಲಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.