ಮಡಿಕೇರಿ, ಏ. 20: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಸ್ಕ್ ಧರಿಸುವದನ್ನು ಕಡ್ಡಾಯಗೊಳಿಸಿವೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲೂ ಸಹ ವ್ಯಾಪಾರಿಗಳು, ಗ್ರಾಹಕರು ಸೇರಿದಂತೆ ಸಾರ್ವಜನಿಕರು ಮನೆಗಳಲ್ಲೇ ಬಟ್ಟೆಯಿಂದ ತಯಾರಿಸಿದ ಮಾಸ್ಕ್ಗಳನ್ನು ಅಥವಾ ಬಟ್ಟೆಗಳನ್ನು ಕಟ್ಟಿಕೊಂಡೆ ಹೊರ ಬರಬೇಕೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ. ಅಂಗಡಿಗಳ ಮಾಸ್ಕ್ ಕಡ್ಡಾಯವಲ್ಲದಿದ್ದರೂ; ಹೊರ ಬರುವಾಗ ಬಾಯಿ, ಮೂಗು ಮುಚ್ಚುವ ಬಟ್ಟೆ ಧರಿಸಿರಬೇಕೆಂದು ಜಿಲ್ಲಾ ಜನತೆಯಲ್ಲಿ ಮನವಿ ಮಾಡಿದ್ದಾರೆ.