ಮಡಿಕೇರಿ, ಏ. 20: ಕೊಡಗು ಕೇರಳ ಸಂಪರ್ಕದ ಕುಟ್ಟ ಮಾನಂದವಾಡಿ ರಸ್ತೆಯನ್ನು ಸಂಪರ್ಕ ರಹಿತ ಮಾಡಲಾಗಿದೆ. ಆದರೆ ಕುಟ್ಟ ಪೆÇಲೀಸ್ ಠಾಣೆಯ ಮುಂಭಾಗದಲ್ಲಿ ಚೆಕ್ ಪೆÇೀಸ್ಟ್ ಇದ್ದು ಗಡಿಯಿಂದ 2 ಕಿ.ಮೀ. ದೂರದಲ್ಲಿದೆ, ಅದರ ನಡುವೆ ಸಿಂಕೋನ ಕಾಲೋನಿ, ಪೆಟ್ರೋಲ್ ಪಂಪ್, ಹಲವಾರು ಅಂಗಡಿ ಮತ್ತು ಮನೆ ಗಳಿದ್ದು ನಿರಂತರ ವಾಹನ ಸಂಚಾರ ಇದ್ದರೂ ಕೂಡ ಪ್ರತಿಯೊಂದು ವಾಹನವನ್ನು ಕೂಲಂಕುಷವಾಗಿ ತಪಾಸಣೆಯ ನಂತರವೇ ಕುಟ್ಟ ಪೆÇಲೀಸರು ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.