ಭಾಗಮಂಡಲ, ಏ. 20: ಇಲ್ಲಿನ ಭಗಂಡೇಶ್ವರ ದೇವಾಲಯದಲ್ಲಿ ಸೋಮವಾರ ಭಕ್ತರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕೋವಿಡ್ 19 ರ ಪರಿಣಾಮದಿಂದಾಗಿ ದೇಶದಾದ್ಯಂತ ಲಾಕ್ ಡೌನ್ ಹೇರಲಾಗಿದ್ದು ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಕೃಷಿಕರು, ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಉದ್ಯಮಿಗಳು ಸಂಕಷ್ಟದ ಪರಿಸ್ಥಿತಿಯಲ್ಲಿದ್ದು ಜನರನ್ನು ಸಂಕಷ್ಟದಿಂದ ಪಾರು ಮಾಡುವಂತೆ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.ಕೊಡಗು ಜಿಲ್ಲೆ ಎರಡು-ಮೂರು ವರ್ಷಗಳಿಂದ ಸಂಕಷ್ಟವನ್ನೆದುರಿಸುತ್ತಿದೆ. ಜಿಲ್ಲೆಯನ್ನು ಕಾವೇರಿ ಮಾತೆ ಸಂಕಷ್ಟದಿಂದ ಪಾರುಮಾಡಿ ಭಕ್ತರನ್ನು ಸಲಹುವಂತೆ ದೇಶದಲ್ಲಿ ತಲೆದೋರಿರುವ ವ್ಯಾಪಕ ಸೋಂಕನ್ನು ತಡೆಗಟ್ಟಿ ದೇಶದ ಪ್ರಜೆಗಳು ನೆಮ್ಮದಿಯ ಜೀವನ ನಡೆಸುವಂತಾಗಲು ಕೃಪೆ ತೋರಬೇಕು ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಮುಖರಾದ ಕುದುಕುಳಿ ಭರತ್, ಪಿ.ಎಂ. ರಾಜೀವ್, ಹೊಸೂರು ಸತೀಶ್‍ಕುಮಾರ್, ರಾಜಾರೈ, ಪುರುಷೋತ್ತಮ, ಪಟ್ಟಮಾಡ ಸುಧೀರ್. ದಂಡಿನ ಜಯಂತ್, ರವಿಹೆಬ್ಬಾರ್, ನಂಜುಂಡಪ್ಪ, ಹಾಗೂ ಸೂರ್ತಲೆ ಜಯಂತ್, ಇದ್ದರು.