ಮಡಿಕೇರಿ, ಏ. 16: ತಾ. 15ರಂದು ವಿಶ್ವ ಕಲಾ ದಿನವನ್ನು ಚಿತ್ರ ಕಲಾವಿದ ಬಿ.ಆರ್. ಸತೀಶ್ ಫೇಸ್‍ಬುಕ್ ಲೈವ್‍ನ ಸಹಾಯದಿಂದ ವಿನೂತ ನವಾಗಿ ಆಚರಿಸಿದರು. ಕೊರೊನಾ ವೈರಸ್ ಜಾಗೃತಿ ಮೂಡಿಸುವ, ಸಂದೇಶ ಸಾರುವ ಕುಂಚ ಗಾಯನದಲ್ಲಿ ಬೃಹತ್ ಕ್ಯಾನ್‍ವಸ್ಸಿನ ಮೂಲಕ ಚಿತ್ರವನ್ನು ಚಿತ್ರಿಸಲಾಯಿತು. ಅದರೊಂದಿಗೆ ಸಂಗೀತವನ್ನು ಟಿ.ಡಿ. ಮೋಹನ್ ಅವರು ಫೇಸ್‍ಬುಕ್ ಲೈವ್‍ನ ಮೂಲಕ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕೊಡಗು ಜಾನಪದ ಪರಿಷತ್ತಿನ ಅಧ್ಯಕ ಅನಂತಶಯನ ವಾಟ್ಸ್‍ಆಪ್‍ನ ನೇರ ಮಾತುಕತೆಯಲ್ಲಿ ದಿನದ ಮಹತ್ವ ತಿಳಿಸಿ ಸರ್ವರಿಗೂ ಶುಭಾಶಯವನ್ನು ಕೋರಿದರು. ವಿಶ್ವವನ್ನು ಕೊರೊನಾ ಆವರಿಸಿಕೊಂಡು ಬಿಟ್ಟಿದೆ. ಈ ಸಂದರ್ಭ ಕಲಾವಿದರೆಲ್ಲರೂ ಕೊರೊನಾ ನಿರ್ಮೂಲನೆಯ ಸಂದೇಶ ಸಾರುವ ಹಾಗೂ ಜಾಗೃತಿ ಮೂಡಿಸುವ ಚಿತ್ರಗಳನ್ನು ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ನಂತರ ಮಡಿಕೇರಿ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಅನಿಲ್. ಎಚ್.ಟಿ ಮಾತನಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಕ್ಲಿಫರ್ಡ್ ಡಿಮೆಲ್ಲೋ ಹಾಗೂ ಟೋಮಿಥಾಮಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪ್ರಾರ್ಥನೆಯ ಚಿತ್ರವಾದ ಗಣಪತಿಯ ಚಿತ್ರವನ್ನು ಐಪ್ಯಾಡ್‍ನ ಮೂಲಕ ಯಶಸ್ವಿನಿ ಬಿ.ಎಸ್. ಚಿತ್ರಿಸಿದರು. ವಂದನೆಯ ಚಿತ್ರವನ್ನು ಐಪ್ಯಾಡ್‍ನ ಮೂಲಕ ಪಯಸ್ವಿನಿ ಬಿ.ಎಸ್. ಚಿತ್ರಿಸಿದರು. ಕಾರ್ಯಕ್ರಮದ ವೀಕ್ಷಣೆಯಲ್ಲಿ ಬಿ.ಪಿ.ರಾಧ ಹಾಗೂ ಕೆ.ಎನ್. ದಮಯಂತಿ ಉಪಸ್ಥಿತರಿದ್ದರು.

- ಸತೀಶ್ ಬಿ.ಆರ್.