ನಾಪೆÇೀಕ್ಲು, ಏ. 15: ಲಾಕ್‍ಡೌನ್ ಹಿನ್ನೆಲೆಯಲ್ಲಿ ನಾಪೆÇೀಕ್ಲು ಮಾರುಕಟ್ಟೆಯನ್ನು ಮುಚ್ಚಲಾಗಿದ್ದು, ತರಕಾರಿ ಇನ್ನಿತರ ಸಾಮಗ್ರಿಗಳನ್ನು ರಸ್ತೆ ಬದಿಯೇ ಮಾರಾಟ ಮಾಡಲಾಗುತ್ತಿದೆ. ಇದರಿಂದ ಜನ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾರುಕಟ್ಟೆಯಲ್ಲಿಯೇ ಅವಕಾಶ ಕಲ್ಪಿಸುವಂತೆ ನಿರ್ಧರಿಸಲಾಗಿದೆ.ಮಡಿಕೇರಿ ಗ್ರಾಮಾಂತರ ಪೆÇಲೀಸ್ ಠಾಣಾ ವೃತ್ತನಿರೀಕ್ಷಕ ದಿವಾಕರ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ನಡೆದ ಪೆÇಲೀಸ್, ಗ್ರಾಮ ಪಂಚಾಯಿತಿ ಮತ್ತು ಸಾರ್ವಜನಿಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಮಾರುಕಟ್ಟೆಯಲ್ಲಿ ಬರೀ ವ್ಯಾಪಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ವಾಹನಗಳನ್ನು ಪೆÇಲೀಸ್ ಮೈದಾನ ಸೇರಿದಂತೆ ಅನತಿ ದೂರದಲ್ಲಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುವದು. ಜನರು ನೂಕುನುಗ್ಗಲಿಗೆ ಅವಕಾಶ ನೀಡದಂತೆ ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳನ್ನು ಖರೀದಿಸಬೇಕು ಎಂದು ವೃತ್ತ ನಿರೀಕ್ಷಕ ದಿವಾಕರ್ ಸಾರ್ವಜನಿಕರಿಗೆ ಸೂಚನೆ ನೀಡಿದರು.ಸಭೆಯಲ್ಲಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ, ಗ್ರಾಮಾಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಮಡಿಕೇರಿ ತಾಲೂಕು ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಸಾರ್ವಜನಿಕರಾದ (ಮೊದಲ ಪುಟದಿಂದ) ಕೇಟೋಳಿರ ಹರೀಶ್ ಪೂವಯ್ಯ, ಎಂ.ಎ.ಮನ್ಸೂರ್ ಅಲಿ, ಮತ್ತಿತರರು ಇದ್ದರು.

ಪಟ್ಟಣ ಖಾಲಿ ಖಾಲಿ: ನಾಪೆÇೀಕ್ಲು ಪಟ್ಟಣದಲ್ಲಿ ಬುಧವಾರ ಜನ ಸಂಖ್ಯೆ ವಿರಳವಾಗಿತ್ತು. ಬ್ಯಾಂಕುಗಳಲ್ಲಿ ಮಾತ್ರ ಸರತಿ ಸಾಲು ಎಂದಿನಂತೆ ಉದ್ದವಾಗಿತ್ತು. ಪೆಟ್ರೋಲ್ ಬಂಕ್‍ಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಕಂಡು ಬಂತು. ಉಳಿದಂತೆ ಲಾಕ್‍ಡೌನ್‍ಗೆ ಮಿಶ್ರ ಪ್ರತಿಕ್ರಿಯೆ ಕಂಡುಬಂತು.