ಸಿದ್ದಾಪುರ, ಏ.15: ಲಾಕ್‍ಡೌನ್ ಸಡಿಲಿಕೆ ಸಮಯ ಕಳೆದ ನಂತರ ಕೋಳಿ ಮಾರಾಟ ಮಾಡಿದ ಗ್ರಾಮ ಪಂಚಾಯಿತಿ ಸದಸ್ಯರುಯೋರ್ವರನ್ನು ಗ್ರಾಮಸ್ಥರು ವಾಹನ ತಡೆದು ಪೆÇಲೀಸರಿಗೆ ಒಪ್ಪಿಸಿದ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ. ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವತಿಯಿಂದ ಮಂಗಳವಾರದಂದು ನಲ್ವತ್ತೇಕ್ರೆ, ಬರಡಿ ಗ್ರಾಮದಲ್ಲಿ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಯೋಗೇಶ್ ಎಂಬವರು ಲಾಕ್‍ಡೌನ್ ಸಮಯದ ಸಡಿಲಿಕೆ ಸಮಯ ನಂತರ ಮಧ್ಯಾಹ್ನ ನಂತರ ಕೋಳಿ ವ್ಯಾಪಾರ - ಗ್ರಾ.ಪಂ. ಸದಸ್ಯರ ವಿರುದ್ಧ ಕ್ರಮ(ಮೊದಲ ಪುಟದಿಂದ) ವಾಹನವೊಂದರಲ್ಲಿ ಜೀವದ ಕೋಳಿಗಳನ್ನು ಮಾರಾಟ ಮಾಡುತ್ತಿದ್ದರು. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಪಂಚಾಯಿತಿ ಸದಸ್ಯರೆ ಕಾನೂನು ಉಲ್ಲಂಘನೆ ಮಾಡಿ ಕೋಳಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಾಹನವನ್ನು ತಡೆ ಒಡ್ಡಿದರು. ನಂತರ ಗ್ರಾಮ ಪಂಚಾಯಿತಿ ಸದಸ್ಯ ಯೋಗೇಶ್ ವಿರುದ್ಧ ಸಿದ್ದಾಪುರ ಪೆÇಲೀಸ್ ಠಾಣೆಯಲ್ಲಿ ಗ್ರಾಮಸ್ಥರು ದೂರು ನೀಡಿದ್ದು, ಪೆÇಲೀಸರು ಕ್ರಮ ಕೈಗೊಂಡಿದ್ದಾರೆ.