ನಾಪೋಕ್ಲು, ಏ. 15: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜನಜಾಗೃತಿ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಸಮೀಪದ ಬಲ್ಲಮಾವಟಿ ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ವೈದ್ಯರು, ಹಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಕೊರೊನಾ ವೈರಸ್ ಜಾಗೃತಿ ಮೂಡಿಸಿದರು. ಹಳ್ಳಿಗಳಲ್ಲಿ ಗ್ರಾಮೀಣ ಜನರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಬಲ್ಲಮಾವಟಿ, ನೆಲಜಿ, ಪೇರೂರು, ಕೀಯಲ್ ಕೇರಿ ಮತ್ತಿತರ ಭಾಗಗಳಲ್ಲಿ ಮನೆಮನೆಗೆ ತೆರಳಿ ಪರಿಶೀಲನೆ ನಡೆಸಿದರು. ಕೀಯಲ್ ಕೇರಿಯ ಪಂದೇಟ್ ಕಾಲೋನಿಯಲ್ಲಿ ಹೊರ ಜಿಲ್ಲೆಯಿಂದ ಬಂದು ತಂಗಿದ್ದವರ ತಪಾಸಣೆಯನ್ನು ನಡೆಸಲಾಯಿತು.