ಮಡಿಕೇರಿ, ಏ. 15: ಕೊಡವರ ಹೊಸ ವರುಷವಾದ ಎಡಮ್ಯಾರ್ ಒಂದನ್ನು ಲಾಕ್‍ಡೌನ್ ಹಿನ್ನೆಲೆ ಜೂಮ್ ವೀಡಿಯೋ ಕಾನ್ಫರೆನ್ಸ್ ಮೂಲಕ ಆಚರಿಸಿ, ಹೊಸ ಕ್ಯಾಲೆಂಡರ್‍ನ್ನು ಲೋಕಾರ್ಪಣೆ ಮಾಡಲಾಯಿತು.

ಕೊಡವಾಮೆರ ಕೊಂಡಾಟ ಕೂಟದ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸದಸ್ಯ ಮಾಳೇಟಿರ ಶ್ರೀನಿವಾಸ್ ಅವರ ಮನೆಯ ನೆಲ್ಲಕ್ಕಿಯಲ್ಲಿ ದೀಪ ಬೆಳಗಿಸಿ ಗುರುಕಾರೋಣರಿಗೆ ಅಕ್ಕಿ ಹಾಕಿ ಪ್ರಾರ್ಥಿಸಿದರು. ಅಂತರರಾಷ್ಟ್ರೀಯ ಅಥ್ಲೀಟ್ ತೀತಮಾಡ ಅರ್ಜುನ್ ದೇವಯ್ಯ ನೂತನ ಕೊಡವ ಕ್ಯಾಲೆಂಡರ್‍ನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿ, ಪ್ರಪಂಚದಲ್ಲಿ ವಿಶಿಷ್ಟ ಸಂಸ್ಕøತಿಯನ್ನು ಹೊಂದಿರು ವುದಕ್ಕೆ ಈ ಹೊಸ ವರ್ಷಾಚರಣೆಯೂ ಒಂದು ಸಾಕ್ಷಿ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ನಾವು, ಎಂದಿಗೂ ನಮ್ಮತನವನ್ನ ಬಿಡದೆ, ನಮ್ಮ ಸಂಪ್ರದಾಯವನ್ನು ಉಳಿಸಿಬೆಳೆಸಲು ಒಂದಾಗಬೇಕೆಂದು ಕರೆ ನೀಡಿದರು.

ಕೊಡವ ಮಕ್ಕಡ ಕೂಟದ ಮಾಜಿ ಅಧ್ಯಕ್ಷ ಬೊಳ್ಳಾಜಿರ ಅಯ್ಯಪ್ಪ ಎಡಮ್ಯಾರ್ ಒಂದರ ಮಹತ್ವ ಹಾಗೂ ಕೊಡವರಿಗೆ ಪ್ರಕೃತಿ ಹಾಗೂ ಗದ್ದೆಯೊಂದಿಗಿರುವ ಅವಿನಾಭಾವ ಸಂಬಂಧದ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಮಾತನಾಡಿ, ಈ ಹೊಸ ವರ್ಷಕ್ಕೆ ಇದೊಂದು ವಿನೂತನ ಪ್ರಯತ್ನವಾಗಿದ್ದು, ಈ ಕ್ಯಾಲೆಂಡರನ್ನು ಜ್ಯೋತಿಷಿ ಕರೋಟಿರ ಶಶಿ ಸುಬ್ರಮಣಿ ಮಾರ್ಗದರ್ಶನದಲ್ಲಿ ಸೂರ್ಯ ಸಿದ್ದಾಂತ ಹಾಗೂ ದ್ರ್‍ಗಣಿತ ಆಧಾರದಲ್ಲಿ ರಚಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೋಟೆರ ಉದಯ್ ಪೂಣಚ್ಚ, ಆಪಾಡಂಡ ಜಗ ಮೊಣ್ಣಪ್ಪ, ವೈಲೇಶ್ ಕೊಡಗು, ಅಲ್ಲಾರಂಡ ವಿಠಲ್ ನಂಜಪ್ಪ, ಉಳುವಂಗಡ ಕಾವೇರಿ ಉದಯ, ಚೆರಿಯಪಂಡ ವಿಶು ಕಾಳಪ್ಪ, ಚಮ್ಮಟಿರ ಪ್ರವೀಣ್ ಉತ್ತಪ್ಪ, ಮೂಕಳಮಾಡ ರಂಜು ನಾಣಯ್ಯ, ಕುಂಡ್ಯೋಳಂಡ ಉತ್ತಪ್ಪ ಸೇರಿದಂತೆ ದೇಶ-ವಿದೇಶದಿಂದ ಭಾಗವಹಿಸಿದ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಉಪಾಧ್ಯಕ್ಷೆ ಮೂವೆರ ರೇಖಾಪ್ರಕಾಶ್ ಸ್ವಾಗತಿಸಿ, ಸದಸ್ಯ ಮಂದೆಯಂಡ ವನಿತ್ ಸಂಜು ಅವರು ನಿರೂಪಿಸಿ, ನಿರ್ವಹಿಸಿದರು. ಪೆÇೀಡಮಾಡ ಭವಾನಿ ನಾಣಯ್ಯ ವಂದಿಸಿದರು.