ಮಡಿಕೇರಿ, ಏ. 14: ಕೊರೊನಾ ಸಂಬಂಧ ದೇಶದ 25 ಜಿಲ್ಲೆಗಳ ಪಟ್ಟಿಯನ್ನು ಭಾರತ ಸರ್ಕಾರವು ಪ್ರಕಟಿಸಿದ್ದು, ಕಳೆದ 14 ದಿನಗಳಲ್ಲಿ ಹೊಸ ಸೋಂಕು ವರದಿಯಾಗದ ಜಿಲ್ಲೆಗಳಲ್ಲಿ ಕೊಡಗು ಕೂಡ ಸೇರಿದ್ದು, ಜಿಲ್ಲೆಯ ಸಾಧನೆಯಾಗಿದೆ. ಆದರೂ ಮುಂದಿನ ಕೆಲ ದಿನಗಳ ಕಾಲ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನತೆ ಕೊರೊನಾ ವಿರುದ್ಧ ಜೊತೆಯಾಗಿ ಹೋರಾಡೋಣವೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕರೆ ನೀಡಿದರು.ಇಂದು ಸಂಜೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಿಸಿ ಮುಂದೆ ಕೈಗೊಳ್ಳುವ ಮಡಿಕೇರಿ, ಏ. 14: ಕೊರೊನಾ ಸಂಬಂಧ ದೇಶದ 25 ಜಿಲ್ಲೆಗಳ ಪಟ್ಟಿಯನ್ನು ಭಾರತ ಸರ್ಕಾರವು ಪ್ರಕಟಿಸಿದ್ದು, ಕಳೆದ 14 ದಿನಗಳಲ್ಲಿ ಹೊಸ ಸೋಂಕು ವರದಿಯಾಗದ ಜಿಲ್ಲೆಗಳಲ್ಲಿ ಕೊಡಗು ಕೂಡ ಸೇರಿದ್ದು, ಜಿಲ್ಲೆಯ ಸಾಧನೆಯಾಗಿದೆ. ಆದರೂ ಮುಂದಿನ ಕೆಲ ದಿನಗಳ ಕಾಲ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನತೆ ಕೊರೊನಾ ವಿರುದ್ಧ ಜೊತೆಯಾಗಿ ಹೋರಾಡೋಣವೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕರೆ ನೀಡಿದರು.ಇಂದು ಸಂಜೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಿಸಿ ಮುಂದೆ ಕೈಗೊಳ್ಳುವ ಎಂದರು.
ಶೀತ ಹಾಗೂ ಉಸಿರಾಟ ತೊಂದರೆ ಸಂಬಂಧಿತ ಕಾಯಿಲೆ ಇರುವವರು ವೈದ್ಯರ ಸಲಹೆ ಪಡೆಯದೆ ನೇರವಾಗಿ ಔಷಧಿ ಅಂಗಡಿಗಳಿಂದ ಔಷಧಿ ಖರೀದಿಸುವುದನ್ನು ನಿಷೇಧಿಸಿದ್ದು, ಈ ಬಗ್ಗೆ ಆದೇಶ ಹೊರಡಿಸಲಾಗಿದೆ ಎಂದು ಮಾಹಿತಿಯಿತ್ತರು.
ಜಿಲ್ಲೆಯಲ್ಲಿರುವ ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಹೆಚ್ಚಿನ ಕಾಳಜಿ ವಹಿಸಬೇಕಿದ್ದು, ಹಿರಿಯರು ಕಡ್ಡಾಯವಾಗಿ ಹೊರಗಡೆ ಬರÀಬಾರದು. ಅಲ್ಲದೆ ಈ ಬಗ್ಗೆ ಹಿರಿಯರ ಮಾಹಿತಿ ಸಂಗ್ರಹಿಸಲು ಜಿಲ್ಲಾಡಳಿತದಿಂದ ಅಭಿಯಾನ ಹಮ್ಮಿ ಕೊಳ್ಳಲಿದ್ದು, ಈ ಸಂದರ್ಭ ಜಿಲ್ಲೆಯ ಜನತೆ ಸಹಕರಿಸುವಂತೆ ಮನವಿ ಮಾಡಿದರು.
(ಮೊದಲ ಪುಟದಿಂದ) ಮನೆಯಿಂದ ಹೊರ ಹೋಗುವಾಗ ಎಲ್ಲರೂ ಬಟ್ಟೆ ಅಥವಾ ಮಾಸ್ಕ್ ಧರಿಸಿ ಓಡಾಡಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕಡಿಮೆ ವೆಚ್ಚದಲ್ಲಿ ಹತ್ತಿ ಬಟ್ಟೆಯ ಮಾಸ್ಕ್ ತಯಾರಿಸಿ ವಿತರಿಸುತ್ತಿದ್ದು, ದಾನಿಗಳು ಮುಂದೆ ಬರುವಂತೆ ಕರೆಯಿತ್ತರು.
ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಯಾರೂ ಕೂಡ ಬೆಳಗ್ಗಿನ ವಾಯುವಿಹಾರಕ್ಕೆ ಹೊರಬಾರದಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಏಪ್ರಿಲ್ ತಿಂಗಳ ಪಡಿತರದಲ್ಲಿ ಶೇ. 85ರ ಸಾಧನೆಯಾಗಿದ್ದು, 4000 ಕುಟುಂಬಗಳಿಗೆ ಆಹಾರ ನೀಡುತ್ತಿದ್ದೇವೆ. 2ನೇ ಹಂತದಲ್ಲಿ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಿರುವ 5000 ಕುಟುಂಬಗಳಿಗೆ ಪ್ರತಿ ತಿಂಗಳು 10 ಕೆ.ಜಿ. ಉಚಿತ ಅಕ್ಕಿ ಹಾಗೂ ಎಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಿರುವ 3300 ಮಂದಿಗೆ ಕೆಜಿಯೊಂದಕ್ಕೆ ರೂ. 15ರಂತೆ ತಿಂಗಳಿಗೆ 10 ಕೆ.ಜಿ. ಅಕ್ಕಿ ವಿತರಣೆ ಮಾಡಲು ನಿರ್ಧರಿಸಿದ್ದು, ಈ ಬಗ್ಗೆ ಒಂದೆರಡು ದಿನಗಳಲ್ಲಿ ಕಾರ್ಯಕ್ರಮ ರೂಪಿಸಲಾಗುವುದೆಂದರು.
ಹೊರ ಜಿಲ್ಲೆಯಿಂದ ಬಂದಿರುವ ಕಾರ್ಮಿಕರು 14 ದಿನ ಗೃಹಪರೀಕ್ಷೆ ಮುಗಿಸಿದ್ದರೆ ಅಂತವರನ್ನು ಅವರವರ ಊರುಗಳಿಗೆ ಕಳುಹಿಸಲು ಕ್ರಮಕೈಗೊಳ್ಳುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಸೂಚಿಸಿದ್ದು, ಹೊರ ರಾಜ್ಯಗಳ ಕಾರ್ಮಿಕರನ್ನು ಮಾತ್ರ ಇಲ್ಲಿಯೇ ಉಳಿಸಿ ಕೊಳ್ಳಲಾಗುವುದೆಂದರು.
ಟೆಲಿಮೆಡಿಸಿನ್
ಕೊಡಗು ವೈದ್ಯಕೀಯ ಸಂಸ್ಥೆಯ ಮೂಲಕ ರೋಗಿಗಳು ಇದೀಗ ಟೆಲಿಮೆಡಿಸಿನ್ ಮೂಲಕ ಆರೋಗ್ಯ ಸೇವೆ ಪಡೆಯಲು ಹೊಸ ವೆಬ್ಸೈಟ್ ತಿತಿತಿ.ಞoಜಚಿgueಜoಛಿ.ಟeಣsಣಚಿಡಿಣ.iಟಿ ಅನ್ನು ಆರಂಭಿಸಲಾಗಿದ್ದು, ಈ ಸಂಬಂಧ ಟೆಲಿಮೆಡಿಸಿನ್ ಫೀವರ್ ಕ್ಲಿನಿಕ್ ಕಂಟ್ರೋಲ್ ರೂಂ ಅನ್ನು ಕೂಡ ಸ್ಥಾಪಿಸಲಾಗಿದೆ. ಜಿಲ್ಲೆಯ ಜನತೆ ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸೂಚಿಸಿದರು. ಇದರೊಂದಿಗೆ ಜಿಲ್ಲಾಡಳಿತ ಸ್ಥಾಪಿಸಿರುವ ಹಸಿವು ಪೆಟ್ಟಿಗೆ ವ್ಯವಸ್ಥೆಗೆ ದಾನಿಗಳು ಸಹಕರಿಸುವಂತೆಯೂ, ಗ್ರಾಮ ಸಂಚಾರದಲ್ಲಿ ತೊಡಗಿರುವ ಆರೋಗ್ಯ ಸೇವಕರ ತಂಡಗಳಿಗೂ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದರು. ಕೊಡಗು ಮೆಡಿಕಲ್ ಕಾಲೇಜಿಗೆ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನಿಂದ 6 ವೈದ್ಯರುಗಳು ನಿಯೋಜಿತರಾಗಿದ್ದಾರೆ ಎಂದರು.
ಎಸ್ಪಿ ಹೇಳಿಕೆ
ಕೊರೊನಾ ಸಂಬಂಧಿತ ಪೊಲೀಸ್ ವ್ಯವಸ್ಥೆಯ ಕುರಿತು ವಿವರಣೆಯಿತ್ತ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಜಿಲ್ಲೆಯಲ್ಲಿ ಒಟ್ಟು 15 ಚೆಕ್ಪೋಸ್ಟ್ಗಳು ಕಾರ್ಯನಿರ್ವಹಿಸುತ್ತಿದ್ದು, ಲಾಕ್ಡೌನ್ ಬಳಿಕ 4500 ವಾಹನಗಳ ತಪಾಸಣೆ ಮಾಡಲಾಗಿದೆ. ಲಾಕ್ಡೌನ್ ಉಲ್ಲಂಘಿಸಿದ 9 ಮಂದಿ ಹಾಗೂ ಗೃಹಪರೀಕ್ಷೆ ಉಲ್ಲಂಘಿಸಿದ ಒಬ್ಬರ ವಿರುದ್ಧ ಮೊಕದ್ದಮೆ ದಾಖಲಾಗಿದೆ ಎಂದರು.
ಹೊಸ ವ್ಯವಸ್ಥೆಯಲ್ಲಿ ಹೊರ ಜಿಲ್ಲೆಗಳಿಂದ ಬರುವವರಿಗೆ ಚೆಕ್ಪೋಸ್ಟ್ನಲ್ಲೇ ಸೀಲು ಹಾಕುವ ವ್ಯವಸ್ಥೆ ಮಾಡಿದ್ದು, ಅವರ ಸಂಪೂರ್ಣ ವಿವರವನ್ನು ಜಿಲ್ಲಾಡಳಿತಕ್ಕೆ ನೀಡಲಾಗುತ್ತಿದ್ದು, ಇದರಿಂದ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯ ಸುಲಭವಾಗುತ್ತಿದೆ ಎಂದರು.
ಮುಂದಿನ ಆದೇಶದವರೆಗೆ ಹೊರ ಜಿಲ್ಲೆಗೆ ಮಾತ್ರ ಸಂಚರಿಸಲು ಕೇವಲ ಅನಾರೋಗ್ಯ ಸಂಬಂಧಿತ ವ್ಯಕ್ತಿಗಳಿಗೆ ಪಾಸ್ ಅನ್ನು ನೀಡಲಾಗುತ್ತಿದ್ದು, ಈ ಬಗ್ಗೆ ಜನತೆ ಸಹಕರಿಸುವಂತೆ ಅವರು ಮನವಿ ಮಾಡಿದರು. ದಿನನಿತ್ಯದ ಅಗತ್ಯ ವಸ್ತುಗಳ ಸಾಗಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದೂ ಅವರು ತಿಳಿಸಿದರು.
ಈ ಸಂದರ್ಭ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್, ಮೆಡಿಕಲ್ ಕಾಲೇಜಿನ ಡೀನ್ ಡಾ. ಕಾರ್ಯಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಅರುಂಧತಿ ಇದ್ದರು
.