ಸೋಮವಾರಪೇಟೆ, ಏ. 14: ಅನಾರೋಗ್ಯದ ನಿಮಿತ್ತ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಮುಲ್ಕಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಯೋರ್ವರು ಮೃತಪಟ್ಟಿದ್ದು, ಮೃತದೇಹದ ಗುರುತು ಪತ್ತೆಗೆ ಪೆÇಲೀಸ್ ಇಲಾಖೆ ಮನವಿ ಮಾಡಿದೆ.
ಮೃತ ವ್ಯಕ್ತಿಯ ಹೆಸರು ರಾಜು (43) ಸೋಮವಾರಪೇಟೆ ಎಂಬದಾಗಿ ನಮೂದಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನೆಲೆ ಮುಲ್ಕಿ ಪೆÇಲೀಸ್ ಠಾಣೆಯಿಂದ ಸೋಮವಾರಪೇಟೆ ಪೆÇಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಮೃತ ವ್ಯಕ್ತಿಯ ಸರಿಯಾದ ವಿಳಾಸ ಪತ್ತೆಯಾಗದೇ ಇರುವದರಿಂದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಕೂಡಲೇ ಸೋಮವಾರಪೇಟೆ ಪೆÇಲೀಸ್ ಠಾಣೆಗೆ ಅಥವಾ ಮುಲ್ಕಿ ಪೆÇಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದೆ.
ದೂರವಾಣಿ ಸಂಖ್ಯೆ: ಸೋಮವಾರಪೇಟೆ ಪೆÇಲೀಸ್ ಠಾಣೆ- 08276-282040/9480804952. ಮುಲ್ಕಿ ಪೆÇಲೀಸ್ ಠಾಣೆ-0824-2290533.