ಕೂಡಿಗೆ, ಏ. 14 : ಕೂಡಿಗೆ ಡೈರಿಯಿಂದ ದಿನಂಪ್ರತಿ ಐದು ಸಾವಿರ ಲೀಟರ್ ಹಾಲನ್ನು ಕೊಡಗು ಜಿಲ್ಲೆಯ ಮೂರು ತಾಲೂಕಿನ ಕೆಲ ಭಾಗಗಳಿಗೆ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಮತ್ತು ಆಹಾರ ಇಲಾಖೆಯ ಸೂಚನೆ ಮೇರೆಗೆ ಈ ವರೆಗೆ ನೀಡಲಾಗುತ್ತಿತು. ಅಧಿಕಾರಿಗಳ ಆದೇಶದಂತೆ ಇಂದು ಬೆಳಿಗ್ಗೆ 2916 ಲೀಟರ್ ಡೈರಿ ವತಿಯಿಂದ ನೀಡಲಾಗುತ್ತಿದೆ. ತಾ. 15ರಂದು (ಇಂದು) ಕುಶಾಲನಗರ 685, ಮಡಿಕೇರಿ 860, ವೀರಾಜಪೇಟೆ 656, ಸೋಮವಾರ ಪೇಟೆಗೆ 715 ಲೀಟರ್ ಹಾಲನ್ನು ಇಂದು ನೀಡಲಾಗಿದೆ ಎಂದು ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್ ಹಾಗೂ ಉಪ ಮಾರುಕಟ್ಟೆ ವ್ಯವಸ್ಥಾಪಕ ಡಿ.ಎಂ. ಮಲ್ಲೇಶ ತಿಳಿಸಿದ್ದಾರೆ.