ನಾಪೆÇೀಕ್ಲು, ಏ. 13: ವ್ಯಕ್ತಿಯೋರ್ವರು ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಾಫಿ ಬೆಳೆಗಾರ ಬಟ್ಟೀರ ಅಪ್ಪಣ್ಣ (57) ಮೃತಪಟ್ಟಿರುವ ದುರ್ಧೈವಿ.

ಘಟನೆ ವಿವರ: ಅಪ್ಪಣ್ಣ ಎಂದಿನಂತೆ ಸೋಮವಾರ ಬೆಳಿಗ್ಗೆ 8 ಗಂಟೆಗೆ ತಮ್ಮ ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿರುವ ತಮ್ಮ ತೋಟಕ್ಕೆ ಒಂಟಿ ನಳಿಕೆ ಕೋವಿಯೊಂದಿಗೆ ತೆರಳಿದ್ದಾರೆ. ಮಧ್ಯಾಹ್ನ ಊಟಕ್ಕೆ ಬಾರದ ಹಿನೆÀ್ನಲೆಯಲ್ಲಿ 2 ಗಂಟೆ ಸುಮಾರಿಗೆ ಕೆಲಸದ ಕಾರ್ಮಿಕರನ್ನು ಅವರ ಪತ್ನಿ ಗೀತಾ ತೋಟಕ್ಕೆ ಕಳುಹಿಸಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಇವರಿಗೆ ಓರ್ವ ಪುತ್ರನಿದ್ದು, ಈತ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾನೆ. ಸ್ಥಳಕ್ಕೆ ನಾಪೆÇೀಕ್ಲು ಠಾಣಾಧಿಕಾರಿ ಆರ್.ಮಂಚಯ್ಯ, ಎ.ಎಸ್.ಐ ದೇವರಾಜ್ ಮತ್ತು ಸಿಬ್ಬಂದಿ ಭೇಟಿ ನೀಡಿ ಕಾನೂನು ಕ್ರಮಕೈಗೊಂಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.