ಕೂಡಿಗೆ, ಏ. 14: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಎರಡು ದಿನ ಸುರಿದ ಗಾಳಿ ಮಳೆಗೆ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಕುಶಾಲನಗರ ಹೋಬಳಿ ವ್ಯಾಪ್ತಿಯ. ಶಿರಂಗಾಲ, ಹೆಬ್ಬಾಲೆ ಕೂಡುಮಂಗಳೂರು ವ್ಯಾಪ್ತಿಯ ಚಿಕ್ಕತ್ತೂರು ಹಾರಂಗಿ ಭಾಗ ಗಳಲ್ಲಿ ಸುರಿದ ಗಾಳಿ - ಮಳೆಯಿಂದ ವಿದ್ಯುತ್ ಕಂಬಗಳು ಮುರಿಯಲ್ಪಟ್ಟಿವೆ.

ಈಗಾಗಲೆ ಮುರಿದ ವಿದ್ಯುತ್ ಕಂಬಗಳನ್ನು ವಿದ್ಯುತ್ ಇಲಾಖೆಯ ಸಿಬ್ಬಂದಿ ಸರಿಪಡಿಸಲು ಮುಂದಾಗಿ ದ್ದಾರೆ. ಈಗಾಗಲೇ ಮುರಿದ ವಿದ್ಯುತ್ ಕಂಬಗಳನ್ನು ಸರಿಪಡಿಸಿ ಸಮರ್ಪಕ ವಾಗಿ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ವೋಲ್ಟೇಜ್ ಬಗ್ಗೆಯೂ ಗಮನ ಹರಿಸಲಾಗುವುದು ಎಂದು ಕುಶಾಲನಗರ ಹೋಬಳಿ ವ್ಯಾಪ್ತಿಯ ವಿಭಾಗಿಯ ಇಂಜಿನಿಯರ್ ಬಸವರಾಜ್ ತಿಳಿಸಿದ್ದಾರೆ.