*ಸಿದ್ದಾಪುರ, ಏ.14: ಲಾಕ್ ಡೌನ್ ಆದೇಶ ಉಲ್ಲಂಘಿಸಿ ತರಕಾರಿ ಮಾರಾಟ ಮಾಡಿದ ವಾಹನಗಳಿಗೆ ನೆಲ್ಯಹುದಿಕೇರಿ ಪಂಚಾಯಿತಿ ದಂಡ ವಿಧಿಸಿದೆ.

ಕೊರೊನಾ ಲಾಕ್ ಡೌನ್ ವಿನಾಯಿತಿಯನ್ನು ಸೋಮವಾರ, ಬುಧವಾರ ಮತ್ತು ಶುಕ್ರವಾರಕ್ಕೆ ಸೀಮಿತಗೊಳಿಸಲಾಗಿದೆ. ಆದರೆ ಈ ನಿಯಮ ಉಲ್ಲಂಘಿಸಿ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕೆಲವು ವಾಹನಗಳು ತರಕಾರಿ ಮಾರಿ ಕೊಂಡು ನೆಲ್ಯಹುದಿಕೇರಿ ಗ್ರಾ.ಪಂ ಗೆ ಸೇರಿದ ಗ್ರಾಮಗಳಿಗೆ ಆಗಮಿಸಿದ್ದವು. ಇದನ್ನು ಗಮನಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಿದರು.