ಇಂದು ಇಡೀ ವಿಶ್ವವನ್ನೇ ಭಾದಿಸುತ್ತಿರುವ ಕೋವಿಡ್ 19 ಸೋಂಕಿಗೆ ಭಾರತೀಯ ಮೂಲದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ಇದನ್ನು ಸರಬರಾಜು ಮಾಡಲು ವಿಶ್ವದ ಕನಿಷ್ಟ 30 ದೇಶಗಳು ಭಾರತಕ್ಕೆ ದುಂಬಾಲು ಬಿದ್ದಿವೆ. ಈ ಔಷಧದ ಹಿಂದಿದೆ ರೋಚಕ ಇತಿಹಾಸ. 1799 ರಲ್ಲಿ, ಟಿಪ್ಪು ಸುಲ್ತಾನ ನನ್ನು ಬ್ರಿಟಿಷರು ಸೋಲಿಸಿದಾಗ, ಇಡೀ ಮೈಸೂರು ಸಾಮ್ರಾಜ್ಯವು ಬ್ರಿಟಿಷರ ನಿಯಂತ್ರಣಕ್ಕೆ ಬಂದಿತು. ಮುಂದಿನ ಕೆಲವು ದಿನಗಳವರೆಗೆ, ಬ್ರಿಟಿಷ್ ಸೈನಿಕರು ತಮ್ಮ ವಿಜಯೋತ್ಸವದ ಅಚರಣೆಯಲ್ಲಿ ಹಲವು ಸೈನಿಕರು ಮಲೇರಿಯಾದಿಂದ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದರು, ಸೊಳ್ಳೆ ಕಾಟದಿಂದ ಪಾರಾಗಲು ಬ್ರಿಟಿಷ್ ಸೈನ್ಯವು ತಕ್ಷಣವೇ ತಮ್ಮ ಕ್ಯಾಂಪ್ನ್ನು ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ಸ್ಥಳಾಂತರಿಸಿತು. ಆ ಪ್ರದೇಶವೇ ಇಂದಿನ ಬೆಂಗಳೂರು ಕಂಟೋನ್ಮೆಂಟ್ ಏರಿಯಾ ಆಗಿದೆ.
ಅದೇ ಸಮಯದಲ್ಲಿ, ಯುರೋಪಿಯನ್ ವಿಜ್ಞಾನಿಗಳು ಮಲೇರಿಯಾ ಚಿಕಿತ್ಸೆಗಾಗಿ ಬಳಸಬಹುದಾದ "ಕ್ವಿನೈನ್" ಎಂಬ ರಾಸಾಯನಿಕ ಸಂಯೋಜನೆಯ ಟಾನಿಕ್ನ್ನು ಕಂಡುಹಿಡಿದಿದ್ದರು .
ಅನಿವಾರ್ಯವಾಗಿ ಬ್ರಿಟಿಷ್ ಸೈನ್ಯವು ಈ ಸಮಯದಲ್ಲಿ ಕ್ವಿನೈನ್ ಅನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಂಡಿತು ಮತ್ತು ಎಲ್ಲಾ ಸೈನಿಕರಿಗೆ ವಿತರಿಸಲಾಯಿತು, ಆದರೆ ಒಂದು ಸಣ್ಣ ಸಮಸ್ಯೆ ಇತ್ತು. ಅನಾರೋಗ್ಯದಿಂದಿದ್ದ ಸೈನಿಕರು ಶೀಘ್ರವಾಗಿ ಚೇತರಿಸಿಕೊಂಡರೂ, ಉಷ್ಣವಲಯದ ಭಾರತದ ಹವಾಗುಣಕ್ಕೆ ಹೊಂದಿಕೊಳ್ಳಲಾಗದ ಇನ್ನೂ ಅನೇಕ ಸೈನಿಕರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು, ಏಕೆಂದರೆ ಅವರು ಕ್ವಿನೈನ್ ಔಷಧವನ್ನು ನಿಗದಿಪಡಿಸಿದ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಿಲ್ಲ ಎಂದು ನಂತರ ತಿಳಿದು ಬಂತು. ಏಕೆ ಗೊತ್ತೆ ? ಏಕೆಂದರೆ ಅದು ತುಂಬಾ ಕಹಿಯಾಗಿತ್ತು !! ಆದ್ದರಿಂದ, ಕಹಿಯಾದ ಕ್ವಿನೈನ್ ಸೇವಿಸದಿರುವ ಮೂಲಕ, ಭಾರತದಲ್ಲಿ ಬೀಡುಬಿಟ್ಟಿದ್ದ ಬ್ರಿಟಿಷ್ ಸೈನಿಕರು ತಮ್ಮ ರೋಗನಿರೋಧಕ ಶಕ್ತಿ ಕಡಿಮೆ ಮಾಡಿಕೊಂಡಿದ್ದರು.
ನಂತರ ಎಲ್ಲಾ ಉನ್ನತ ಬ್ರಿಟಿಷ್ ಅಧಿಕಾರಿಗಳು ಮತ್ತು ವಿಜ್ಞಾನಿಗಳು ತಮ್ಮ ಸೈನಿಕರನ್ನು ಈ ಡೋಸೇಜ್ಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳಲು ಮನವೊಲಿಸತೊಡಗಿದರು. ಅಗ ಮದ್ಯದೊಂದಿಗೆ ಬೆರೆಸಿದ ಕಹಿಯಾದ ಕ್ವಿನೈನ್ ಸ್ವಲ್ಪ ಮಟ್ಟಿಗೆ ಸಿಹಿಯಾಗುವುದು ಅವರ ಅನುಭವಕ್ಕೆ ಬಂತು. ಆಗ ಕ್ವಿನೈನ್ನೊಂದಿಗೆ ಬೆರೆಸಿ ಸೇವಿಸುತಿದ್ದ ಮದ್ಯವು ಜಿನ್ ಆಗಿತ್ತು. ಮತ್ತು ಕ್ವಿನೈನ್ನೊಂದಿಗೆ ಬೆರೆಸಿದ ಜಿನ್ ಅನ್ನು ‘ಜಿನ್ ಟಾನಿಕ್’ ಎಂದು ಕರೆಯಲಾಯಿತು, ಬ್ರಿಟಿಷ್ ಸೈನಿಕರು ಹಿಂಜರಿಕೆ ಇಲ್ಲದೆ ಇದನ್ನು ಸೇವಿಸಲು ಅರಂಬಿಸಿದರು.
ನಂತರ ಬ್ರಿಟಿಷ್ ಸೈನ್ಯವು ತಮ್ಮ ಮಾಸಿಕ ಪಡಿತರ ಭಾಗವಾಗಿ ‘ಟಾನಿಕ್ ವಾಟರ್’ (ಕ್ವಿನೈನ್) ಜೊತೆಗೆ ಕೆಲವು ಬಾಟಲಿಗಳ ಜಿನ್ಗಳನ್ನು ವಿತರಿಸಲು ಪ್ರಾರಂಭಿಸಿತು, ಬ್ರಿಟಿಷ್ ಸೈನಿಕರಲ್ಲಿ ಹೆಚ್ಚುತ್ತಿರುವ ಜಿನ್ ಮತ್ತು ಇತರ ರೀತಿಯ ಮದ್ಯದ ಬೇಡಿಕೆಯನ್ನು ಪೂರೈಸಲು, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಬೆಂಗಳೂರಿನಲ್ಲಿ ಮತ್ತು ಸುತ್ತಮುತ್ತ ಕೆಲವು ಡಿಸ್ಟಿಲ್ಲರಿಗಳನ್ನು ನಿರ್ಮಿಸಿತು, ನಂತರ ಅದನ್ನು ದೇಶದ ಇತರ ಭಾಗಗಳಿಗೆ ಸರಬರಾಜು ಮಾಡಲು ಆರಂಬಿಸಿತು. ಬೆಂಗಳೂರು ಈಗಾಗಲೇ ಭಾರತದ ಪಬ್ ರಾಜಧಾನಿಯಾಗಿ ಬ್ರಿಟಿಷ್ ಕಾಲದಲ್ಲಿಯೇ ಇತ್ತು. ಸ್ವಾತಂತ್ರ್ಯಾನಂತರ ಬ್ರಿಟಿಷರ ಈ ಡಿಸ್ಟಿಲ್ಲರಿಗಳನ್ನು ವಿಟ್ಟಲ್ ಮಲ್ಯ (ವಿಜಯ್ ಮಲ್ಯ ಅವರ ತಂದೆ) ಅವರು ಖರೀದಿಸಿದರು. ನಂತರ ಯುನೈಟೆಡ್ ಬ್ರೂವರೀಸ್ ಎಂಬ ಹೆಸರಿನಡಿಯಲ್ಲಿ ಕಂಪೆನಿ ಸ್ಥಾಪಿಸಿದರು.
ನಂತರ ಕ್ವಿನೈನ್ ಬಹಳಷ್ಟು ಬಾರಿ ಅವಿಷ್ಕಾರಗೊಂಡು ಹೈಡ್ರಾಕ್ಸಿಕ್ಲೋರೊಕ್ವಿನ್ ಎಂದು ರೂಪಾಂತರಗೊಂಡಿದೆ. ಇಂದಿಗೂ ಮಲೇರಿಯಾ ಜ್ವರ ಅಥವಾ ಇತರ ಸೋಂಕಿಗೆ ವಿಶ್ವದಲ್ಲಿ ಅತ್ಯಂತ ಹೆಚ್ಚು ಬಳಕೆ ಆಗುತ್ತಿರುವ ಔಷಧಿ ಆಗಿದೆ. ಏಕೆಂದರೆ ಇದು ಅತ್ಯಂತ ಕನಿಷ್ಟ ಸೈಡ್ ಎಫೆಕ್ಟ್ ಗಳನ್ನು ಹೊಂದಿದೆ. ಇದರ ಪೇಟೆಂಟ್ ಭಾರತ ಹೊಂದಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ.
ಕೋವರ್ ಕೊಲ್ಲಿ ಇಂದ್ರೇಶ್ ಟಿeತಿsiಟಿಜಡಿesh@gmಚಿiಟ.ಛಿom.