ಪ್ರಯಾಣಿಕರೇ ಗಮನಿಸಿ... ಬೆಂಗಳೂರಿಗೆ ತೆರಳುವ ಬಸ್ ಇನ್ನೇನು ಹೊರಡಲು ತಯಾರಾಗಿದೆ..., ಮಂಗಳೂರಿಗೆ ತೆರಳುವ ಬಸ್ ಇನ್ನು ಕೆಲವೇ ನಿಮಿಷಗಳಲ್ಲಿ ನಿಲ್ದಾಣಕ್ಕೆ ಬರಲಿದೆ.

ಹೀಗೆಲ್ಲಾ ಸಂದೇಶಗಳನ್ನು ನೀಡುತ್ತಿದ್ದ ಕೊಡಗು ಜಿಲ್ಲೆಯ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಈಗ ಕೇಳಿಬರುತ್ತಿರುವುದೇನು ?

ಟೊಮ್ಯಾಟೋ...ಟೊಮ್ಯಾಟೋ...ಕೆ.ಜಿ.ಗೆ 20 ರೂಪಾಯಿ, ಬೀನ್ಸ್ 40 ರೂಪಾಯಿ... ಬೆಸ್ಟ್... ಚೀಪ್ ರೇಟ್...ಬನ್ನಿ. ಬನ್ನಿ.... ಕನ್ಸಿಶನ್‍ರೇಟ್ ಇಂದು ಮಾತ್ರ, ನಾಳೆ ಸಿಗೋದಿಲ್ಲ.

ಇದೇನಾಗಿ ಹೋಯಿತು ? ದಿನಕ್ಕೆ ಸಾವಿರಾರು ಪ್ರಯಾಣಿಕರು ಬರುತ್ತಿದ್ದ ಬಸ್‍ಸ್ಟಾಂಡ್ ಈಗ ತರಕಾರಿ ಮಾರಾಟದ ಸಂತೆಯಾಯಿತೇ ?

ಇದರ ಹಿಂದಿದೆ ಒಂದು ಯಶಸ್ವಿ ಕಾರ್ಯಯೋಜನೆಯ ಕಥೆ.