ಗೋಣಿಕೊಪ್ಪ ವರದಿ, ಏ. 12: ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ವನದಲ್ಲಿ ಕೂರಹಂದಿ ಬೇಟೆ ಮಾಡಿರುವ ಆರೋಪದಡಿ ಒಬ್ಬ ಆರೋಪಿಯನ್ನು ಕಲ್ಲಳ್ಳ ವನ್ಯ ಜೀವಿ ವಲಯ ಅಧಿಕಾರಿಗಳು ಬಂಧಿಸಿದ್ದು, ಮೂವರು ಆರೋಪಿಗಳು ತಲೆಮರೆಸಿ ಕೊಂಡಿದ್ದಾರೆ.ಕೋತೂರು ಗ್ರಾಮದ ಬೊಮ್ಮಾಡು ಹಾಡಿ ನಿವಾಸಿ ಶಶಿಧರ್ ಆಲಿಯಾಸ್ ಶಿವಣ್ಣ (29) ಬಂಧಿತ ಆರೋಪಿ, ಬೊಮ್ಮಾಡು ನಿವಾಸಿಗಳಾದ ನವೀನ್, ಗಣಪತಿ ಆಲಿಯಾಸ್ ಮಲ್ಲ, ಜಡೆಯಪ್ಪ ತಲೆ ಮರೆಸಿಕೊಂಡಿರುವ ಆರೋಪಿಗಳು. ಬಂಧಿತನಿಂದ ವಶಕ್ಕೆ ಪಡೆದ ಕೂರ ಹಂದಿ ಕಳೇಬರವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಇದರೊಂದಿಗೆ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.ಹುಣಸೂರು ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಾಧಿಕಾರಿ ಮಹೇಶ್ ಕುಮಾರ್, ಸಹಾಯಕ ಉಪ ಸಂರಕ್ಷಣಾಧಿಕಾರಿ ಪಾಲ್ ಆಂಥೋನ ಮಾರ್ಗದರ್ಶನದಲ್ಲಿ ಆರ್ಎಫ್ಓ ಗಿರೀಶ್, ಡಿಆರ್ಎಫ್ಓ ಯೋಗೇಶ್, ಸಿಬ್ಬಂದಿ ಮುಜಾಮಿಲ್ ಪಕಾಲಿ, ಗಣೇಶ್, ಭರಮಪ್ಪ, ಕುಮಾರ್, ನಿರಲ್ ಇದ್ದರು.