ಮಡಿಕೇರಿ, ಏ. 12: ಕರ್ನಲ್ ಆಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾಳೆಯಡ ಎಂ. ಕಾರ್ಯಪ್ಪ ಅವರು ಸದ್ಯದಲ್ಲೇ ಬ್ರಿಗೇಡಿಯರ್ ಹುದ್ದೆ ಏರಲಿದ್ದಾರೆ. ಸೇನೆಯು ಇವರ ಹೆಸರನ್ನು ಬ್ರಿಗೇಡಿಯರ್ ಹುದ್ದೆಗೆ ಶಿಫಾರಸು ಮಾಡಿದೆ.ಕ| ಕಾರ್ಯಪ್ಪ ಅವರಿಗೆ ಉತ್ತಮ ವಿದ್ಯಾ ಹಿನ್ನೆಲೆಯಿದ್ದು, ದೇಶ ಹಾಗೂ ವಿದೇಶಗಳಲ್ಲಿ ಪ್ರತಿಷ್ಠಿತ ರಕ್ಷಣಾ ಕಾಲೇಜುಗಳಲ್ಲಿ ಅಧ್ಯಯನ ಮತ್ತು ತರಬೇತಿ ಹೊಂದಿದ್ದಾರೆ.ಕ| ಕಾರ್ಯಪ್ಪ ಅವರಿಗೆ ಸೇನಾ ಪರಿಣತಿ ಉತ್ತಮವಾಗಿದ್ದು, ನಾಗಾಲ್ಯಾಂಡ್, ಮಣಿಪುರ, ಸಿಯಾಚಿನ್, ಕಾರ್ಗಿಲ್ ಯುದ್ಧ, ಜಮ್ಮು ಮತ್ತು ಕಾಶ್ಮೀರಗಳ ವಿವಿಧ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಿ ಭಾಗವಹಿಸಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಗಾಯಗೊಂಡಿದ್ದ ಹಿನ್ನೆಲೆಯೂ ಇದ್ದು, ಇವರ ಶೌರ್ಯ ಗಮನಿಸಿ ಸೇನೆಯ ವೀರಚಕ್ರ, ಸೇನಾ ಮೆಡಲ್, ಚೀಫ್ ಆಫ್ ಆರ್ಮಿ ಸ್ಟಾಫ್ ಕಮಂಡೇಶನ್ ಕಾರ್ಡ್ ಹಾಗೂ ಇತರ ಹಲವು ಗೌರವಾನ್ವಿತ ಪದಕ ಸ್ವೀಕರಿಸಿದ್ದಾರೆ. ಇದೀಗ ಹಿಂದೊಮ್ಮೆ ಹೋರಾಡಿದ್ದ ಕಾರ್ಗಿಲ್ ಬೆಟ್ಟಶ್ರೇಣಿಯಲ್ಲೇ ಇವರ ಸೇವೆ ಮುಂದುವರಿದಿದ್ದು, ಕ| ಕಾರ್ಯಪ್ಪ ಅವರು ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಲೆ|| ಮುತ್ತಣ್ಣ ಹಾಗೂ ಜಾಜಿ (ಕರ್ತಮಾಡ) ಅವರ ಸುಪುತ್ರ.