ಕೂಡಿಗೆ, ಏ 11: ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸರಹದ್ದಿನ ಚಿಕ್ಕತ್ತೂರು ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆ ಗಾಳಿಗೆ ಮನೆಯ ಮೇಲ್ಛಾವಣಿಯ ಸಿಮೆಂಟ್ ಶೀಟ್‍ಗಳು ನೆಲಕ್ಕೆ ಉರುಳಿ ನಷ್ಟ ಉಂಟಾಗಿದೆ.

ನಾಗೇಶ್, ಉದಯ, ವೀಲಾಸಿನಿ ಸೇರಿದಂತೆ 20ಕ್ಕೂ ಹೆಚ್ಚು ಮನೆಗಳ ಮತ್ತು ಕೊಟ್ಟಿಗೆಯ ಶೀಟ್‍ಗಳು ಗಾಳಿಗೆ ಹಾರಿಹೋಗಿ ನಷ್ಟವಾಗಿದೆ.

ಉದಯ ಎಂಬವರಿಗೆ ಸೇರಿದ ಎರಡು ಎಕರೆ ಪ್ರದೇಶದಲ್ಲಿ ಬೆಳೆಯಲಾದ ಹಸಿಮೆಣಸಿಕಾಯಿ ಗಿಡಗಳು ನೆಲಕಚ್ಚಿವೆ.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ವಿಲಾಸಿನಿ ಅವರ ಮನೆಯ ಮೇಲೆ ಮರಬಿದ್ದು ಮನೆಗೆ ಮತ್ತು ಮನೆಯ ವಸ್ತುಗಳು ಹಾನಿಯಾಗಿವೆ. ಕಳೆದ ರಾತ್ರಿ ಸುರಿದ ಮಳೆ - ಗಾಳಿಗೆ ಈ ವ್ಯಾಪ್ತಿಯ ಅನೇಕ ರೈತರ ಜಮೀನಿನ ಸಿಲ್ವರ್ ಮರಗಳು ನೆಲಕ್ಕೆ ಬಿದ್ದಿವೆ.ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿ ಬೇಟಿ ನೀಡಿ ಪರಿಶೀಲನೆ ಮಾಡಿ ಪರಿಹಾರ ನೀಡುವ ಭರವಸೆ ನೀಡಿರುತ್ತಾರೆ.