ಮಡಿಕೇರಿ, ಏ. 11: ಮೋಬಿಯಸ್ ಫೌಂಡೇಷನ್ ವತಿಯಿಂದ ಕೊಡಗು ಜಿಲ್ಲಾ ಪತ್ರಕರ್ತರ ಸಂಘಕ್ಕೆ ನೀಡಲಾದ ಆಹಾರ ಕಿಟ್‍ಗಳನ್ನು ಪತ್ರಿಕಾ ಭವನದಲ್ಲಿ ಸಂಘದ ಸದಸ್ಯರಿಗೆ ವಿತರಣೆ ಮಾಡಲಾಯಿತು. ಈ ಸಂದರ್ಭ ಫೌಂಡೇಷನ್‍ನ ಸಂಚಾಲಕ ಮಧು ಬೋಪಣ್ಣ, ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ ಇದ್ದರು.