ಶನಿವಾರಸಂತೆ, ಏ. 11: ಪಟ್ಟಣದ ದಾಕ್ಷಾಯಿಣಿ ನ್ಯಾಯಬೆಲೆ ಅಂಗಡಿಯಲ್ಲಿ ಕರ್ನಾಟಕ ಅವಶ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ ಆದೇಶದನ್ವಯ ಪ್ರಾಧೀಕರಣದ ಷರತ್ತು ಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಆ ಅಂಗಡಿ ಪರವಾನಗಿಯನ್ನು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಅಮಾನತ್ತು ಗೊಳಿಸಿದ್ದಾರೆ.