ಮಡಿಕೇರಿ, ಏ. 10: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ನಿರ್ಬಂಧ ಸಡಿಲಿಕೆ ನಡುವೆ ಇಂದು ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ, ವ್ಯಾಪಾರಿಗಳು ಮತ್ತು ಗ್ರಾಹಕರು ಬಿರುಸಿನ ವಹಿವಾಟು ನಡೆಸಿದರು.ಕಳೆದ ದಿನಗಳಿಗಿಂತಲೂ ಇಂದು ಎಲ್ಲೆಡೆ ಮಧ್ಯಾಹ್ನ 12 ಗಂಟೆ ತನಕವೂ ಸರದಿಯಲ್ಲಿ ನಿಂತವರ ಸಂಖ್ಯೆ ಮುಂದುವರಿದೇ ಇತ್ತು. ಮೇಲಿಂದ ಮೇಲೆ ಪೊಲೀಸರು; ಜನತೆ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡುತ್ತಿದ್ದದ್ದು ಕೇಳಿಬಂತು.ಮಧ್ಯಾಹ್ನ ನಿಗದಿತ ಸಮಯ ಮುಗಿಯುತ್ತಿದ್ದಂತೆ ವ್ಯಾಪಾರಿಗಳು ಮತ್ತು ಗ್ರಾಹಕರು ಗಂಟುಮೂಟೆ ಹೊತ್ತು ತಮ್ಮ ತಮ್ಮ ಮನೆಗಳ ಕಡೆ ಮುಖಮಾಡಿದರು. ಇತ್ತ ನಗರಸಭೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ ಸಹಯೋಗದಲ್ಲಿ ಸ್ವಚ್ಛತೆಗೆ ಒತ್ತು ನೀಡಿ ಔಷಧಿ ಸಿಂಪಡಿಸಿದರೆ, ಪೊಲೀಸರು ಜನ ಜಂಗುಳಿ ಚದುರ ತೊಡಗಿದ್ದರಿಂದ ನಿಟ್ಟುಸಿರು ಬಿಟ್ಟರು. ನಗರದ ಕಾಲೇಜು ರಸ್ತೆ ಇನ್ನಿತರೆ ಡೆಗಳಲ್ಲಿ ವಾಹನ ದಟ್ಟಣೆಯೂ ಇಂದು ಅಧಿಕವಾಗಿ ಕಂಡುಬಂತು. ನಾಪೆÇೀಕ್ಲುವಿನಲ್ಲಿ ವ್ಯಾಪಾರ

ನಾಪೆÇೀಕ್ಲುವಿನಲ್ಲಿ ಜನ ಜಂಗುಳಿ ಇಂದು ಎಂದಿಗಿಂತ ಕಡಿಮೆ ಕಂಡು ಬಂತು. ಆದರೆ ಹೆಚ್ಚಿನ ಜನ ಮಾಸ್ಕ್ ಇಲ್ಲದೆ ಓಡಾಟ ನಡೆಸುತ್ತಿದ್ದರು.

ಪ್ರಧಾನಮಂತ್ರಿ ಜನಧನ್ ಯೋಜನೆಯಲ್ಲಿ ಖಾತೆಗೆ ಜಮಾ ಆದ 500 ರೂ. ಪಡೆಯಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ಬ್ಯಾಂಕಿನ ಎಟಿಎಂ ಬಳಿ ನಿಂತಿರುವದು ಕಂಡು ಬಂತು. ಆದರೆ ಪಡಿತರದ ಸಾಲು ಹಾಗೂ ಬ್ಯಾಂಕ್‍ನ ಎಟಿಎಂ ಗಾಗಿ ನಿಂತ ಸಾಲಿನಲ್ಲಿ ಸಾರ್ವಜನಿಕರು ಅಂತರ ಕಾಯ್ದು ಕೊಳ್ಳುವಂತೆ ಪೆÇಲೀಸರು ಕ್ರಮಕೈಗೊಂಡಿದ್ದರು. ನೋಡಲ್ ಅಧಿಕಾರಿ ಇಂಧುಶ್ರೀ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕಿಟ್ ವಿತರಣೆ: ನಾಪೆÇೀಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ

(ಮೊದಲ ಪುಟದಿಂದ) ಸಾಬಾ ತಿಮ್ಮಯ್ಯ ನೇತೃತ್ವದಲ್ಲಿ ಬೇತು ಗ್ರಾಮದ ಬಾಪೂಜಿ ವಠಾರದಲ್ಲಿ ಆಹಾರ ಕಿಟ್ ವಿತರಿಸಲಾಯಿತು.

ಜನ ಮೆಚ್ಚುಗೆ: ಬ್ಯಾಂಕಿನಲ್ಲಿ ಜನ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ನಾಪೆÇೀಕ್ಲು ಕೆನರಾ ಬ್ಯಾಂಕ್‍ನ ಅಧೀನದಲ್ಲಿರುವ ಜನಮಿತ್ರ ಸಣ್ಣ ಬ್ಯಾಂಕಿಂಗ್ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಟಿ.ಎಲ್. ಓಂಪ್ರಕಾಶ್ ನಾಪೆÇೀಕ್ಲು ಪಟ್ಟಣದ ಸುತ್ತಮುತ್ತ ಮನೆಮನೆಗೆ ತೆರಳಿ ಬಯೋಮೆಟ್ರಿಕ್ ಮೂಲಕ ಜನರಿಗೆ ಹಣ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಇದರಿಂದ ವೃದ್ಧರು ಹಾಗೂ ಮಹಿಳೆಯರಿಗೆ ಹೆಚ್ಚಿನ ಅನು ಕೂಲವಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.