ಮಡಿಕೇರಿ, ಏ. 10: ಜಿಲ್ಲೆಯಲ್ಲಿ ಲಾಕ್‍ಡೌನ್ ನಿರ್ಬಂಧದ ನಡುವೆಯೂ ಅನಾವಶ್ಯಕವಾಗಿ ಅಲ್ಲಲ್ಲಿ ವಾಹನಗಳಲ್ಲಿ ಓಡಾಟ ನಡೆಸುವವರ ವಿರುದ್ಧ ಪೊಲೀಸ್ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಮುಂದುವರಿದಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅನಗತ್ಯ ಓಡಾಟ ನಡೆಸುವ ವಾಹನ ಸವಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ವಾಹನ ವಶಪಡಿಸಿಕೊಳ್ಳುತ್ತಿದ್ದಾರೆ.
ತಾ. 10 ರಂದು ಕಾರ್ಯಾಚರಣೆಯಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ 51 ದ್ವಿಚಕ್ರ ವಾಹನ, 80 ತ್ರಿಚಕ್ರ ವಾಹನ ಹಾಗೂ 26 ಚತುಷ್ಚಕ್ರ ವಾಹನಗಳು ಸೇರಿದಂತೆ ಒಟ್ಟು 157 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ಪ್ರತಿನಿತ್ಯ ಈ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು ಎಂದು ಎಸ್ಪಿ ಡಾ. ಸುಮನ್ ತಿಳಿಸಿದ್ದಾರೆ.