ಸೋಮವಾರಪೇಟೆ, ಏ.9: ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಕೊಡಗು ಜಿಲ್ಲಾ ನೆಹರು ಯುವ ಕೇಂದ್ರದ ಆಶ್ರಯದಲ್ಲಿ ಸಾಮೂಹಿಕ ಜಾಗೃತಿ ಉತ್ಪಾದನೆ ಸೇರಿದಂತೆ ಕೊರೊನಾ ವೈರಸ್ ನಂತರದ ಯೋಜನೆಗಳನ್ನು ಸಂಘಟಿಸಲು ಯುವ ಸ್ವಯಂಸೇವಕರ ಅಗತ್ಯವಿದ್ದು, ಆಸಕ್ತರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

ಆರೋಗ್ಯ ನೈರ್ಮಲ್ಯ ಮತ್ತು ಇತರೆ ಸವಾಲುಗಳಿಗೆ ಸಂಬಂಧಿಸಿದ ಜಾಗೃತಿ ಅಭಿಯಾನ ಮತ್ತು ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರು ಭಾಗವಹಿಸುವ ಅಗತ್ಯವಿದ್ದು, ಆಸಕ್ತರು ಮತ್ತು ಪರಿಣಿತಿಗೆ ಸಂಬಂಧಿಸಿದ ಕ್ಷೇತ್ರ ಹೊಂದಿರುವವರು ಕ್ಯೂ.ಆರ್.ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಥವಾ ತಿತಿತಿ.biಣ.ಟಥಿ/ಟಿಥಿಞseಟಿvoಟuಟಿಣeeಡಿs(hಣಣಠಿ://ತಿತಿತಿ.biಣ.ಟಥಿ/ಟಿಥಿಞseಟಿvoಟuಟಿಣeeಡಿs ಇಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ನೆಹರು ಯುವ ಕೇಂದ್ರದ ಯುವ ಸಮನ್ವಯ ಅಧಿಕಾರಿ-9961332968, ಲೆಕ್ಕಾಧಿಕಾರಿ-7760454340, ರಾಷ್ಟ್ರೀಯ ಯುವ ಕಾರ್ಯಕರ್ತರಾದ ಸಂತೋಷ್‍ಕುಮಾರ್ (ಮೊ: 8762306475) ಲಕ್ಷ್ಮೀಕಾಂತ್ ಕೆ. (ಮೊ: 9482938239) ಮಿಥುನ್ (9900396997) ಚರಣ್ (7483767129) ಅವರುಗಳನ್ನು ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಉಲ್ಲಾಸ್ ತಿಳಿಸಿದ್ದಾರೆ.