ಮಡಿಕೇರಿ, ಏ. 9: ಮಡಿಕೇರಿಯ ಭಗವತಿ ನಗರದ ಕ್ಯಾನ್ಸರ್ ಪೀಡಿತ ಬಡ ಕುಟುಂಬದ ಮಹಿಳೆಗೆ ತಾ. 6 ರಂದು ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಚಿಕಿತ್ಸೆಗಾಗಿ ಒಕ್ಕೂಟದ ಸದಸ್ಯರಿಂದ ಸಂಗ್ರಹಿಸಿದ 10,100 ರೂಪಾಯಿ ಹಣದ ಚೆಕ್ ಅನ್ನು ಅವರ ಮಗನಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಒಕ್ಕೂಟದ ಮೈಕಲ್ ವೆಗಾಸ್, ಸುಕುಮಾರ್ ಹಾಕತ್ತೂರು ಮತ್ತು ಒಕ್ಕೂಟದ ಮಾರ್ಗದರ್ಶಕರು, ಹಿರಿಯರು, ತನಲ್ ಆಶ್ರಮದ ಮೇಲ್ವಿಚಾರಕ ಮಹಮ್ಮದ್ ತನಲ್ ಹಾಜರಿದ್ದರು.