ಸೋಮವಾರಪೇಟೆ, ಏ. 9: ಜಿಲ್ಲೆಯ ಲೋಕೋಪಯೋಗಿ ಇಲಾಖೆ ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರಿಗೆ ಸರ್ಕಾರದಿಂದ ಬಿಡುಗಡೆಯಾಗಿದ್ದ ಅನುದಾನವನ್ನು ವಿತರಿಸದೇ, ಇಲಾಖೆಯ ಕೆಲ ಅಧಿಕಾರಿಗಳು ಸರ್ಕಾರಕ್ಕೆ ವಾಪಸ್ ಹೋಗುವಂತೆ ಮಾಡಿರುವದು ಖಂಡನೀಯ ಎಂದು ಸೋಮವಾರಪೇಟೆ ತಾಲೂಕು ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರ ಸಂಘ ತಿಳಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ವಿ.ಎ. ಲಾರೆನ್ಸ್, ಮಾರ್ಚ್ ತಿಂಗಳಿನಲ್ಲಿ ಗುತ್ತಿಗೆದಾರರಿಗೆ ಹಣ ನೀಡುವ ಭರವಸೆ ಕೊಟ್ಟಿದ್ದ ಇಲಾಖೆಯ ಅಧಿಕಾರಿಗಳು, ಇದೀಗ 13 ಕೋಟಿಗೂ ಅಧಿಕ ಹಣ ಸರ್ಕಾರಕ್ಕೆ ವಾಪಸ್ ಹೋಗುವಂತೆ ಮಾಡಿದ್ದಾರೆ. ಇದರಿಂದಾಗಿ ಗುತ್ತಿಗೆದಾರರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಶಾಸಕರುಗಳು ಈ ಬಗ್ಗೆ ತಕ್ಷಣ ಗಮನಹರಿಸ ಬೇಕೆಂದು ಮನವಿ ಮಾಡಿದ್ದಾರೆ.

ಇಲಾಖೆಯಿಂದ ಗುರುತಿಸಲ್ಪಟ್ಟ ಕಾಮಗಾರಿಗಳನ್ನು ಗುತ್ತಿಗೆದಾರರು ಈಗಾಗಲೇ ನಿರ್ವಹಿಸಿದ್ದಾರೆ. ಬೇರೆಯವರೊಂದಿಗೆ ಸಾಲ ಪಡೆದಿದ್ದು, ಮಾರ್ಚ್‍ನಲ್ಲಿ ಬಿಲ್ ಆದ ನಂತರ ಸಾಲ ಮರುಪಾವತಿಸುವ ಒಡಂಬಡಿಕೆ ಮಾಡಿಕೊಂಡಿರುವ ಗುತ್ತಿಗೆದಾರರು ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಲಾರೆನ್ಸ್ ತಿಳಿಸಿದ್ದಾರೆ.

ಕಳೆದ 20.03.2020ರಂದು 335.69 ಲಕ್ಷ, 21 ರಂದು 159.50 ಲಕ್ಷ, 24ರಂದು 270.02ಲಕ್ಷ, 26ರಂದು 144.32 ಲಕ್ಷ, 27 ರಂದು 395.69 ಲಕ್ಷ ಸೇರಿದಂತೆ 13 ಕೋಟಿ ಬಿಡುಗಡೆಯಾಗಿದ್ದರೂ ಕೆಲಸ ನಿರ್ವಹಿಸಿರುವ ಗುತ್ತಿಗೆದಾರರಿಗೆ ಪಾವತಿಸದೇ ವಿಳಂಬ ಮಾಡಲಾಗಿದೆ. ತದನಂತರ ಕೊರೊನಾ ವೈರಸ್ ಹಿನ್ನೆಲೆ ಎಲ್ಲಾ ಬಿಲ್‍ಗಳನ್ನು ತಡೆಹಿಡಿಯ ಲಾಗಿದೆ. ಈ ಹಿನ್ನೆಲೆ ಗುತ್ತಿಗೆದಾರರು ಸಾಲದ ಸುಳಿಯಲ್ಲಿ ಸಿಲುಕಿ ನರಳುವಂತಾಗಿದೆ ಎಂದರು.

ಇದರೊಂದಿಗೆ ತಾಂತ್ರಿಕವಾಗಿ ಕೊಡಗು ವಿಭಾಗ ಮಂಗಳೂರು ಸರ್ಕಲ್ ವ್ಯಾಪ್ತಿಗೆ ಒಳಪಟ್ಟಿದ್ದು, ಯಾವದೇ ಬಿಲ್‍ಗಳನ್ನು ಮಂಜೂರು ಮಾಡಿಸಲು ದೂರದ ಮಂಗಳೂರಿಗೆ ಖುದ್ದಾಗಿ ತೆರಳಬೇಕಿದೆ. ಇದರಿಂದಾಗಿ ಬಿಲ್ ಪಾವತಿಯಲ್ಲಿ ವಿಳಂಬ ವಾಗುತ್ತಿದ್ದು, ಇದರ ಪ್ರತ್ಯಕ್ಷ ಹೊಡೆದ ಗುತ್ತಿಗೆದಾರರ ಮೇಲಾಗುತ್ತಿದೆ. ಪಕ್ಕದ ಹಾಸನ, ಮೈಸೂರು ಜಿಲ್ಲೆಯಲ್ಲಿರುವ ಆನ್‍ಲೈನ್ ವ್ಯವಸ್ಥೆಯನ್ನೇ ಕೊಡಗಿಗೂ ಅನ್ವಯಿಸಲು ಶಾಸಕರುಗಳು ಮುತುವರ್ಜಿ ತೋರಬೇಕು ಎಂದು ಲಾರೆನ್ಸ್ ಒತ್ತಾಯಿಸಿದ್ದಾರೆ.

ಕಳೆದ 2017-18 ಹಾಗೂ 18-19ನೇ ಸಾಲಿನಲ್ಲಿ ಕೊಡಗು ಪ್ಯಾಕೇಜ್ ಮುಖಾಂತರ ಬಿಡುಗಡೆಯಾದ 100 ಕೋಟಿ ರೂಪಾಯಿಯಲ್ಲಿ 40 ಕೋಟಿ ಹಣ ಬಿಡುಗಡೆಯಾಗಿಲ್ಲ. ಪ್ರಕೃತಿ ವಿಕೋಪ ಪರಿಹಾರದ ಅಡಿಯಲ್ಲಿ 10 ಕೋಟಿ ಹಣ ಬರಲು ಬಾಕಿಯಿದೆ. ವಾರ್ಷಿಕ ನಿರ್ವಹಣೆಯ 10 ಕೋಟಿ, ಕಟ್ಟಡ ಹಾಗೂ ಸೇತುವೆ ನಿರ್ವಹಣೆಯ ಅನುದಾನ 4 ಕೋಟಿ ಅನುದಾನ ಬರಲು ಬಾಕಿ ಇರುವ ನಡುವೆಯೇ ಸರ್ಕಾರದಿಂದ ಬಂದಿದ್ದ 13 ಕೋಟಿ ಹಣವೂ ವಾಪಸ್ ಹೋಗಿದೆ. ಇದರಿಂದಾಗಿ ಗುತ್ತಿಗೆದಾರರು, ಕಾರ್ಮಿಕರು ತೀರಾ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಶಾಸಕರುಗಳು ಈ ಬಗ್ಗೆ ತಕ್ಷಣ ಗಮನಹರಿಸಬೇಕೆಂದು ಸಂಘದ ಅಧ್ಯಕ್ಷ ಲಾರೆನ್ಸ್ ಸೇರಿದಂತೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲು ಆಗ್ರಹ