ಕೂಡಿಗೆ, ಏ. 9: ಕರ್ನಾಟಕದಲ್ಲಿ ಪ್ರಥಮವಾಗಿ ಪ್ರಾರಂಭಗೊಂಡ ಕೂಡಿಗೆ ಡೈರಿಯಿಂದ ದಿನಂಪ್ರತಿ ಐದು ಸಾವಿರ ಲೀಟರ್ ಹಾಲನ್ನು ಕೊಡಗು ಜಿಲ್ಲೆಯ ಮೂರು ತಾಲೂಕಿನ ಕೆಲಭಾಗಗಳಿಗೆ ಹಾಗೂ ಜಿಲ್ಲಾಧಿಕಾರಿಗಳ ಆದೆÉೀಶದಂತೆ ಮತ್ತು ಅಹಾರ ಇಲಾಖೆಯ ಸೂಚನೆ ಮೇರೆಗೆ ನೀಡಲಾಗುತ್ತದೆ.ಅಧಿಕಾರಿಗಳ ಆದೇಶದಂತೆ ತಾ. 10ರಂದು (ಇಂದು) ಬೆಳಿಗ್ಗೆ 2916 ಲೀಟರ್ ಡೈರಿ ವತಿಯಿಂದ ನೀಡ ಲಾಗುತ್ತಿದೆ. ಕುಶಾಲನಗರಕ್ಕೆ 685 ಲಿ., ಮಡಿಕೇರಿಗೆ 860, ವೀರಾಜ ಪೇಟೆಗೆ 656 ಸೋಮವಾರಪೇಟೆಗೆ 715 ಲೀಟರ್ ಹಾಲನ್ನು ಇಂದು ನೀಡಲಾಗಿದೆ ಎಂದು ಡೈರಿ ವ್ಯವಸ್ಥಾಪಕ ನಂದೀಶ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಹಾಲು ಒಕ್ಕೂಟ ಮತ್ತು ಹಾಸನ ಹಾಲು ಒಕ್ಕೂಟದ ಆದೇಶದಂತೆ ಕೂಡಿಗೆ ಡೈರಿ ವತಿಯಿಂದ ಐದು ಸಾವಿರ ಲೀಟರ್ ಹಾಲನ್ನು ಉಚಿತವಾಗಿ ನೀಡುವಂತೆ ಅದೇಶ ಬಂದಿರುತ್ತದೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಹಾಗೂ ಅದ್ಯತೆಯ ಮೇರೆಗೆ ಉಚಿತವಾಗಿ ಹಾಲನ್ನು ನೀಡಲಾಗುವುದು ಎಂದು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ತಿಳಿಸಿದ್ದಾರೆ.