ಸಿದ್ದಾಪುರ, ಏ. 9: ನೆಲ್ಲಿಹುದಿಕೇರಿ ಹಾಗೂ ವಾಲ್ನೂರು ಗ್ರಾಮಗಳ ಪಡಿತರ ವಿತರಣಾ ಕೇಂದ್ರಕ್ಕೆ ಕುಶಾಲನಗರ ಹೋಬಳಿಯ ನೋಡಲ್ ಅಧಿಕಾರಿ ರಾಜಶೇಖರ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂದರ್ಭ ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮ ಲೆಕ್ಕಿಗ ಸಂತೋಷ್, ಪಿ.ಡಿ.ಓ ಅನಿಲ್ ಕುಮಾರ್, ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ, ನೆಲ್ಲಿಹುದಿಕೇರಿ ಗ್ರಾ.ಪಂ ಉಪಾಧ್ಯಕ್ಷೆ ಸಫಿಯ ಹಾಗೂ ಗ್ರಾ.ಪಂ ಸದಸ್ಯರುಗಳು ಹಾಜರಿದ್ದರು.