ಮಡಿಕೇರಿ, ಏ. 9: ದೇಶದಾದ್ಯಂತ ಕೊರೊನಾ ಲಾಕ್‍ಡೌನ್ ಹಿನ್ನೆಲೆ ಸಂಪೂರ್ಣ ಲಾರಿಗಳ ಸಂಚಾರ ಸ್ಥಗಿತಗೊಂಡಿದ್ದು, ಬಹುತೇಕ ಬಡ ಲಾರಿ ಚಾಲಕರು, ಸಂಕಷ್ಟದ ಸ್ಥಿತಿ ತಲುಪಿರುವ ಹಿನ್ನೆಲೆ ಮಡಿಕೇರಿಯ ಲಾರಿ ಮಾಲೀಕರ ಹಾಗೂ ಚಾಲಕರ ಸಂಘದಿಂದ ಮಡಿಕೇರಿ ತಾಲೂಕು ಭಾಗದ ಬಹುತೇಕ ಲಾರಿ ಚಾಲಕರ ಮನೆಗಳಿಗೆ ಅಗತ್ಯ ದಿನಸಿ ಸಾಮಗ್ರಿಗಳ ಕಿಟ್ ಅನ್ನು ವಿತರಿಸಲಾಯಿತು.

ಕಿಟ್ ವಿತರಣೆ ಸಂದರ್ಭ ಸಂಘದ ಅಧ್ಯಕ್ಷ ಶಿವ ಬೋಪಣ್ಣ, ಉಪಾಧ್ಯಕ್ಷ ಬಿ.ಕೆ. ಮೋಹನ್‍ಕುಮಾರ್, ಖಜಾಂಚಿ ಗಣೇಶ್, ಕಾರ್ಯದರ್ಶಿ ಶ್ರೀನಿವಾಸ್, ಸದಸ್ಯರಾದ ಮನು, ಮಮ್ಮು, ಮೊಹಮ್ಮದ್ ಉಪಸ್ಥಿತರಿದ್ದರು.