ಮಡಿಕೇರಿ, ಏ. 8 : ಮಡಿಕೇರಿ ತಹಶೀಲ್ದಾರ್ ಮಹೇಶ್ ಇಂದು ನಗರದ ಚೈನ್ಗೇಟ್ ಬಳಿ ಇರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದಿರುವ ಕಾರ್ಮಿಕರ ಕುಂದು-ಕೊರತೆಗಳನ್ನು ವಿಚಾರಿಸಿದರು.
ಈ ಸಂದರ್ಭ 55 ಜನ ಕಾರ್ಮಿಕರು ಮತ್ತು 13 ಮಕ್ಕಳು ಸೇರಿದಂತೆ 68 ಜನರಿಗೆ ಕಾರ್ಮಿಕ ಇಲಾಖೆ ವತಿಯಿಂದ ಮಾಸ್ಕ್ ಮತ್ತು ಕೊಬ್ಬರಿ ಎಣ್ಣೆಯನ್ನು ವಿತರಿಸಲಾಯಿತು. ಕಾರ್ಮಿಕ ನಿರೀಕ್ಷಕ ಎಂ.ಎಂ. ಯತ್ನಟ್ಟಿ ಇತರರು ಇದ್ದರು.
ಕುಶಾಲನಗರದ ಸಮೀಪದ ಬಸವನಹಳ್ಳಿಯ ಹೊಸಕಾಡಿನ ಶೇಡ್ನಲ್ಲಿ ವಾಸವಾಗಿರುವ 3 ಸೋಲಿಗ, 4 ಬೆಟ್ಟಕುರುಬ, 2 ಕ್ರಿಶ್ಚಿಯನ್ ಮತ್ತು 1 ಜೇನುಕುರುಬ ಕುಟುಂಬದವರು ವಾಸವಿರುವ ಸ್ಥಳಕ್ಕೆ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ ಯತ್ನಟ್ಟಿ ಅವರು ಭೇಟಿ ನೀಡಿ ಪರಿಶೀಲಿಸಿದರು.