ಶ್ರೀಮಂಗಲ, ಏ. 8: ದಕ್ಷಿಣ ಕೊಡಗಿನ ಚಿಕ್ಕಮುಂಡೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದ್ದ ಸ್ಥಳದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಕ್ಯಾಮೆರಾಕ್ಕೆ ಭಾರೀ ಗಾತ್ರದ ಹೆಬ್ಬುಲಿ ಚಿತ್ರ ಸೆರೆಯಾಗಿದೆ. ಗ್ರಾಮದ ರೈತ ಮಚ್ಚಮಾಡ ಭೀಮಯ್ಯ (ಬೊಳ್ಳಿಕಟ್ಟಿ) ಅವರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಟ್ಟಿದ್ದ 6 ತಿಂಗಳ ಗಬ್ಬದ ಹಸು ಮೇಲೆ ಮಂಗಳವಾರ ಮುಂಜಾನೆ ಹುಲಿ ದಾಳಿ ನಡೆಸಿತ್ತು.

ಮಂಗಳವಾರ ರಾತ್ರಿ ಹುಲಿ ಆಗಮಿಸಿ, ಹಸುವಿನ ಕಳೆಬರವನ್ನು ಸ್ವಲ್ಪ ದೂರ ಎಳೆದೊಯ್ದು ಭಾಗಶಃ ತಿಂದಿದೆ. ಸ್ಥಳದಲ್ಲಿ ಬುಧವಾರ ಅರಣ್ಯ ಇಲಾಖೆ ಮತ್ತೊಂದು ಕ್ಯಾಮೆರಾ ಅಳವಡಿಸಿದೆ.