ಸೋಮವಾರಪೇಟೆ, ಮಾ.7: ಕಾಫಿ ತೋಟ ದಲ್ಲಿ ಮರಗಸಿ ಮಾಡು ತ್ತಿದ್ದ ಸಂದರ್ಭ ಆಕಸ್ಮಿಕ ವಾಗಿ ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಕಾರ್ಮಿಕ ರೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಯರಪಾರೆ ಗ್ರಾಮದಲ್ಲಿ ನಡೆದಿದೆ.
ಯರಪಾರೆಯ ಚಂದ್ರಣ್ಣ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಸಿಲ್ವರ್ ಮರಗಳನ್ನು ಕಪಾತು ಮಾಡುತ್ತಿದ್ದ ಬಾಣಾವರ ಗ್ರಾಮದ ಕಾರ್ಮಿಕ ಬಸವರಾಜು (45) ಎಂಬವರೇ ಸಾವನ್ನಪ್ಪಿದವ ರಾಗಿದ್ದು, ಇಂದು ಪೂರ್ವಾಹ್ನ 10.30ರ ಸುಮಾರಿಗೆ ಘಟನೆ ಸಂಭವಿಸಿದೆ.
ಬಸವರಾಜು ಅವರು ಸಿಲ್ವರ್ ಮರಕ್ಕೆ ಏಣಿಯಿಟ್ಟು ಮೇಲೇರಿ ಕೊಂಬೆಗಳನ್ನು ಕಟಾವು ಮಾಡಿ ಕೆಳಗಿಳಿದಿದ್ದು, ಏಣಿಯನ್ನು ಬೇರೊಂದು ಮರಕ್ಕೆ ಇಡುವ ಸಂದರ್ಭ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಕಾಫಿ ತೋಟದ ನಡುವೆ 11 ಕೆ.ವಿ. ವಿದ್ಯುತ್ ತಂತಿ ಹಾಗೂ ಬೋರ್‍ವೆಲ್‍ಗೆ ಸಂಪರ್ಕ ನೀಡಿದ್ದ 3ಫೇಸ್ ವಿದ್ಯುತ್ ತಂತಿ ಹಾದು ಹೋಗಿದ್ದು, ಇದಕ್ಕೆ ಅಲ್ಯೂಮಿನಿಯಂ ಏಣಿ ತಲುಗಿದ್ದ ರಿಂದ ದಿಢೀರ್ ವಿದ್ಯುತ್ ಪ್ರವಹಿಸಿ ಬಸವರಾಜು ಸ್ಥಳದಲ್ಲೇ ಅಸುನೀಗಿ ದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಹಾಗೂ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ಬಸವರಾಜ್ ಅವರು ಪತ್ನಿ ಸೇರಿದಂತೆ ಪುತ್ರಿಯನ್ನು ಅಗಲಿದ್ದಾರೆ. ಸಂಜೆ ಕುಶಾಲನಗರ ಆಸ್ಪತ್ರೆಯಿಂದ ಸಿಬ್ಬಂದಿಯನ್ನು ಕರೆಸಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.