ಪೆರಾಜೆ, ಏ. 6: ಇತ್ತೀಚಿನ ದಿನಗಳಲ್ಲಿ ಹೊರ ಜಿಲ್ಲೆ, ಹೊರ ರಾಜ್ಯ, ಹೊರದೇಶಗಳಿಂದ ಪೆರಾಜೆ ಗ್ರಾಮಕ್ಕೆ ಬಂದವರ ಮನೆಗಳಿಗೆ ಭೇಟಿ ನೀಡಿ ಹೋಂ ಕ್ವಾರಂಟೈನ್ ಸೀಲ್ ಹಾಕಿ, ದೇಶದಲ್ಲಿ ಕೊರೊನಾ ತಡೆಗಟ್ಟುವಲ್ಲಿ ಸರ್ಕಾರದ ಆದೇಶವನ್ನು ವಿವರಿಸಿ, ಮನೆಯಲ್ಲಿಯೇ ಇರಲು ಸೂಚನೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಪಾಜೆ ಆರೋಗ್ಯ ಕೇಂದ್ರದ ಕಿರಿಯ ಪುರುಷ ಆರೋಗ್ಯ ಸಹಾಯಕ ರಘು ಎಂ.ಆರ್., ಕಿರಿಯ ಆರೋಗ್ಯ ಸಹಾಯಕಿ ಶೈಲಜಾ, ಆಶಾ ಕಾರ್ಯಕರ್ತೆಯರಾದ ಹೇಮಲತ, ಪೂರ್ಣೇಶ್ವರಿ ಇದ್ದರು.