ಸುಂಟಿಕೊಪ್ಪ, ಏ. 7 : ಸುಂಟಿಕೊಪ್ಪ ಪಂಚಾಯಿತಿ ವ್ಯಾಪ್ತಿಯಲ್ಲಿ ಪಡಿತರಚೀಟಿ ಹೊಂದಿರದ ಬಡವರಿಗೆ ಸರಕಾರದಿಂದ ಆಹಾರ ಸಾಮಗ್ರಿಗಳ ಕಿಟ್ಟನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ವಿತರಿಸಿದರು.

ರಾಜ್ಯ ಹಾಗೂ ಕೇಂದ್ರ ಸರಕಾರಗಳು ಲಾಕ್‍ಡೌನ್ ನಿಂದ ಬಡಜನತೆಯು ಬಳಲದಂತೆ ಹಸಿವಿನಿಂದ ಕಾಳಜಿ ವಹಿಸಿದ್ದು ಶನಿವಾರ ಗ್ರಾಮ ಪಂಚಾಯಿತಿಯಿಂದ 47 ಮಂದಿ ಕಡು ಬಡವರನ್ನು ಗುರುತಿಸಿ ಆಹಾರ ಕಿಟ್ ಅನ್ನು ವಿತರಿಸಿದರು. ಪಂಚಾಯಿತಿ ಸಿಬ್ಬಂದಿಗಳಾದ ಪುನೀತ್, ಡಿ. ಎಂ. ಮಂಜುನಾಥ್, ಶ್ರೀನಿವಾಸ್, ಸಂದ್ಯಾ ಹಾಗೂ ಪೌರಕಾರ್ಮಿಕರು ಇದ್ದರು.