ಕುಶಾಲನಗರ, ಏ. 7: ಸೋಮವಾರಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಆರ್ಥಿಕ ನೆರವು ನೀಡಲಾಯಿತು. ಕೃಷಿ ಮಾರಾಟ ಇಲಾಖೆ ರಾಜ್ಯ ನಿರ್ದೇಶಕರ ಸೂಚನೆ ಮೇರೆಗೆ ರೂ. 10 ಲಕ್ಷಗಳ ಚೆಕ್‍ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರವಾನಿಸಲಾಯಿತು. ಸಮಿತಿ ಅಧ್ಯಕ್ಷ ಎಂ.ಡಿ. ರಮೇಶ್ ಮತ್ತು ಆಡಳಿತ ಮಂಡಳಿಯವರು ಚೆಕ್‍ಅನ್ನು ಸಮಿತಿ ಕಾರ್ಯದರ್ಶಿ ಎಸ್. ಶ್ರೀಧರ್‍ಗೆ ಹಸ್ತಾಂತರಿಸಿದರು. ಈ ಸಂದರ್ಭ ಸಮಿತಿಯ ಉಪಾಧ್ಯಕ್ಷ ಸಿ.ಪಿ. ವಿಜಯ, ನಿರ್ದೇಶಕರಾದ ಶಶಿ ಭೀಮಯ್ಯ, ಗೌಡಳ್ಳಿ ಕ್ಷೇತ್ರದ ಎ.ಜಿ.ವಿಜಯ, ಸಹಾಯಕ ಕಾರ್ಯದರ್ಶಿ ರವಿಕುಮಾರ್, ಸಿಬ್ಬಂದಿ ಅನಿಲ್ ಇದ್ದರು.