ಯೂಸುಫ್ ನಬ್‍ಹಾನಿ ಕುಕ್ಕಾಜೆ ಪ್ರಿಯರೇ, ಅರಬ್ ರಾಷ್ಟ್ರದ ಪ್ರಸಿದ್ಧ ದೂರದರ್ಶನವೊಂದು, ನಮ್ಮ ನಿದ್ದೆ ಗೆಡಿಸುತ್ತಿರುವ ಕುಪ್ರಸಿದ್ಧ ಕೊರೊನಾ ವೈರಸ್ ಜತೆ ನೇರವಾಗಿ ಭೆÉೀಟಿಯಾಗಿ ಅರಬಿಕ್ ಭಾಷೆಯಲ್ಲಿ ನಡೆಸಿದ ನಾಲ್ಕು ನಿಮಿಷ ಮೂವತ್ತ ಎಂಟು ಸೆಂಕೆಡುಗಳ ಸಂದರ್ಶನವನ್ನು ಇಲ್ಲಿ ಕನ್ನಡಕ್ಕೆ ಭಾಷಾಂತರ ಮಾಡಿದ್ದೇನೆ. ಕೊರೊನಾ ವೈರಸ್‍ನ ಬಗ್ಗೆ ಇಲ್ಲ ಸಲ್ಲದ ಆರೋಪಗಳು ವಾಟ್ಸಪ್ ಮತ್ತಿತರ ಮಾದ್ಯಮಗಳಲ್ಲಿ ಹರಿದಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಅದರ ನಿಜಾಂಶವೇನೆಂದು ಓದಿ ತಿಳಿದು ಕೊಂಡರೆ ಹಲವಾರು ವದಂತಿಗಳಿಂದ ಪಾರಾಗಬಹುದು.ನಿರೂಪಕ: ನಿಮ್ಮ ಇವತ್ತಿನ ಎಲ್ಲಾ ಬ್ಯುಸಿ ಶೆಡ್ಯೂಲುಗಳನ್ನು ರದ್ದುಮಾಡಿ ನಮ್ಮ ಈ ಪುಟ್ಟ ಆಮಂತ್ರಣವನ್ನು ಸ್ವೀಕರಿಸಿ ಭೇಟಿಕೊಟ್ಟಿದ್ದೀರಿ, ತಮಗೆ ಸ್ವಾಗತ.
ಮಿಸ್ಟರ್ ಕೊರೊನಾ : ಪರವಾಗಿಲ್ಲ. ಹೇಳಿ ಸಾರ್.ನಿರೂಪಕ: ನಾನು ನಿಮ್ಮಲ್ಲಿ ಮೊದಲನೆಯದಾಗಿ ಕೇಳುವುದೇನೆಂದರೆ, ನಿಮ್ಮ ಕುಟುಂಬ ಮತ್ತು ಮನೆತನದ ಬಗ್ಗೆ ಸ್ವಲ್ಪ ವಿವರಿಸುವಿರಾ? ಅದರ ಮೂಲ ಎಲ್ಲಿ.?ಮಿಸ್ಟರ್ ಕೊರೊನಾ: ನಮ್ಮದು ಪ್ರಸಿದ್ಧವಾದ ಒಂದು ಪ್ರತಿಷ್ಠಿತ ವೈರಸ್ ಕುಟುಂಬ. ನಮ್ಮ ಕುಟುಂಬದ ಹೆಸರು “ಅಲ್ ತಾಜಿಯ್ಯ.” (ಕಿರೀಟ) ಅಂದರೆ ನಮ್ಮ ದೇಹ ಪ್ರಕೃತಿಯು ಸಾಮಾನ್ಯ ಕಿರೀಟದಂತೆ ಕಾಣುವುದರಿಂದ ನಮ್ಮ ತಲೆಮಾರು ನಮಗೆ ಲ್ಯಾಟಿನ್ ಭಾಷೆಯಲ್ಲಿ “ಕಿರೀಟ” ಎಂದು ಅರ್ಥ ಬರುವ ಕೊರೊನಾ ಎಂದು ಹೆಸರಿಟ್ಟಿದೆ. ನಮ್ಮ ತಲೆಮಾರು ಚೈನಾದಲ್ಲಿ ಪತ್ತೆಯಾದ ಸಾರ್‍ಸ್ ಮತ್ತು ಸೌದಿಯಲ್ಲಿ ಪತ್ತೆಯಾದ ಮೆರ್ಸ್ ಮನೆತನಕ್ಕೆ ಸೇರುತ್ತದೆ. ನಿರೂಪಕ: ನಿಮಗೆ “ಅಔಗಿIಆ 19” ಎಂಬ ಹೆಸರು ಬರಲು ಕಾರಣವೇನು.?
ಮಿಸ್ಟರ್ ಕೊರೊನಾ: ಅದು ನಮಗೆ ನಮ್ಮ ಅಭಿಮಾನಿಗಳು ಕೊಟ್ಟ ಒಂದು ಅಂಕಿತನಾಮ. “ಅಔಖಔಓಂ ಗಿIಖUS ಆISಇಂSಇ 2019’’ ಎಂದಾಗಿದೆ ಅದರ ಪೂರ್ಣ ರೂಪ.
ನಿರೂಪಕ: ನಿಮಗೆ ಸಂತಾನ ಉತ್ಪಾದನೆ ಮಾಡಲು ಎಷ್ಟು ಸಮಯ ಬೇಕಾಗುತ್ತದೆ.?
ಮಿಸ್ಟರ್ ಕೊರೊನಾ: ಅದಕ್ಕೆ ನಿಮ್ಮಂತೆ ಒಂಬತ್ತು ತಿಂಗಳು ಕಾಯಬೇಕಾದ ಅಗತ್ಯವಿಲ್ಲ. ಒಂಟಿಯಾಗಿ ಜೀವಕೋಶಕ್ಕೆ ಪ್ರವೇಶ ಮಾಡಿ ಇಪ್ಪತ್ತನಾಲ್ಕು ಗಂಟೆಯಾಗುವಾಗ ಮಿಲಿಯಗಟ್ಟಲೆ ಮಕ್ಕಳ ಜನನವಾಗುತ್ತವೆ.
ನಿರೂಪಕ: ನಿಮ್ಮ ಕುಟುಂಬಕ್ಕೆ ಬಹಳ ಪುರಾತನ ಕಾಲದ ದಾಖಲೆಯಿದ್ದರೂ ನೀವು ಜನರೆಡೆಯಲ್ಲಿ ಬಹಿರಂಗವಾಗಿ ಕಣಕ್ಕೆ ಇಳಿದದ್ದು ಯಾವಾಗ.? ಎಲ್ಲಿ.?
ಮಿಸ್ಟರ್ ಕೊರೊನಾ: ಈ ಕಳೆದ ವರ್ಷ 2019 ಡಿಸೆಂಬರ್ ತಿಂಗಳಲ್ಲಿ ಚೈನಾ ದೇಶದ “ವುಹಾನ್” ಎಂಬ ಪಟ್ಟಣದಲ್ಲಿ.
ನಿರೂಪಕ: ನೀವು ಮನುಷ್ಯ ಶರೀರದ ಒಳಗೆ ಹೇಗೆ ಪ್ರವೇಶಿಸುತ್ತೀರಿ.?
ಮಿಸ್ಟರ್ ಕೊರೊನಾ : ಮನುಷ್ಯನ ಶರೀರದಲ್ಲಿ ಹಲವಾರು ದ್ವಾರಗಳಿದ್ದರೂ ನಮಗೆ ಪ್ರವೇಶ ಪರವಾನಿಗೆ ಇರುವುದು ಮೂಗು, ಕಣ್ಣು ಮತ್ತು ಬಾಯಿಯಿಂದ ಮಾತ್ರ. ಇತರ ದ್ವಾರಗಳಲ್ಲಿ ಪ್ರವೇಶ ಅನುಮತಿ ಈ ತನಕ ಸಿಗಲಿಲ್ಲ.
ನಿರೂಪಕ: ನೀವು ಒಂದು ಶರೀರದಿಂದ ಬೇರೊಂದು ಶರೀರಕ್ಕೆ ಹೇಗೆ ಸೋಂಕನ್ನು ವರ್ಗಾವಣೆ ಮಾಡುತ್ತೀರಿ..?
ಮಿಸ್ಟರ್ ಕೊರೊನಾ : ಬಹಳ ಕೆಟ್ಟ ರೋಗಾಣುವನ್ನು ಹೊತ್ತುಕೊಂಡು ವರ್ಗಾವಣೆ ಯಾಗುತ್ತೇನೆ. ಅದರೊಂದಿಗೆ ನೆಗಡಿ ಮತ್ತು ಕೆಮ್ಮುವಿನ ಪ್ಯಾಕೇಜ್ ಕೂಡ ನಮ್ಮಲ್ಲಿರುತ್ತದೆ.
ನಿರೂಪಕ: ನೀವು ಇಷ್ಟೊಂದು ಕಷ್ಟಪಟ್ಟು ಮನುಷ್ಯನನ್ನು ಆಕ್ರಮಣ (ಮೊದಲ ಪುಟದಿಂದ) ಮಾಡಿ ಸಾಧಿಸುವ ಕೆಲಸವೇನು.? ನಿಮ್ಮ ಗುರಿಯೇನು.?
ಮಿಸ್ಟರ್ ಕೊರೊನಾ: ನನ್ನ ಗುರಿ ಒಂದು ಮಾತ್ರ. ಅವನ ಶ್ವಾಸಕೋಶವನ್ನು ಸಂಪೂರ್ಣವಾಗಿ ಧ್ವಂಸ ಮಾಡಿ ಅವನನ್ನು ಬದುಕದ ಹಾಗೆ ಮಾಡುವುದು.
ನಿರೂಪಕ: ಒಂದು ಆರೋಗ್ಯವಂತನ ಶರೀರವನ್ನು ತಮ್ಮ ನಿಯಂತ್ರಣಕ್ಕೆ ತರಲು ತಮಗೆ ಎಷ್ಟ್ಟು ದಿನಗಳು ಬೇಕಾಗುತ್ತವೆ.?
ಮಿಸ್ಟರ್ ಕೊರೊನಾ: ಸುಮಾರು ಹದಿನಾಲ್ಕು ದಿನಗಳು.
ನಿರೂಪಕ: ನಿಮಗೆ ಬಹಳ ಇಷ್ಟವಾದ ಹವಾಮಾನ ಮತ್ತು ಪರಿಸರ ಯಾವುದು.?
ಮಿಸ್ಟರ್ ಕೊರೊನಾ: ತಂಪಾದ ಜಾಗ, ಬೆಳಕಿಲ್ಲದ ಕತ್ತಲಾದ ಸ್ಥಳ, ಒದ್ದೆಯಾದ ಜಾಗ ನನಗೆ ಬಹಳ ಇಷ್ಟ.
ನಿರೂಪಕ: ನೀವು ಮನುಷ್ಯ ಶರೀರವನ್ನು ಪ್ರವೇಶಿಸಿದರೆ ಅವನಿಗೆ ಅನುಭವಕ್ಕೆ ಬರುವ ನಿಶಾನೆಗಳು ಯಾವುವು.?
ಮಿಸ್ಟರ್ ಕೊರೊನಾ: ವಿಪರೀತ ಜ್ವರ, ಒಣ ಕೆಮ್ಮು, ಆಯಾಸ.
ನಿರೂಪಕ: ಹಾಗಾದರೆ ಅದನ್ನು ಖಚಿತಪಡಿಸುವುದು ಹೇಗೆ.?
ಮಿಸ್ಟರ್ ಕೊರೊನಾ: ಅದು ದೊಡ್ಡ ಕೆಲಸವೇನಲ್ಲ. ಸಾಮಾನ್ಯ ರೋಗಗಳನ್ನು ಖಚಿತಪಡಿಸುವಂತೆಯೇ ಮೂಗಿನಿಂದ ಅಥವಾ ಗಂಟಲಿನಿಂದ ಸ್ಯಾಂಪಲ್ ತೆಗೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು.
ನಿರೂಪಕ: ನಿಮಗೆ ಬಹಳ ಇಷ್ಟವಾದದ್ದು ಯಾವುದು.?
ಮಿಸ್ಟರ್ ಕೊರೊನಾ: ಗುಂಪುಗೂಡುವುದು. ಸಭೆ ಸಮಾರಂಭಗಳನ್ನು ನಡೆಸುವುದು. ಶುಚಿತ್ವ ಕಾಪಾಡದಿರುವುದು. ಕೊಳಕು ಮಾಡುವುದು.
ನಿರೂಪಕ: ನಿಮಗೆ ಇಷ್ಟವಲ್ಲದ ಸಂಗತಿ ಯಾವುದು.?
ಮಿಸ್ಟರ್ ಕೊರೊನಾ: ಬಿಸಿಲಿರುವ ವಾತಾವರಣ, ಮನೆಯಲ್ಲಿ ಕೂರುವುದು, ಸಭೆ ಸಮಾರಂಭಗಳಿಗೆ ಹೋಗದಿರುವುದು, ಶುಚಿತ್ವ ಪಾಲಿಸುವುದು, ಆಗಾಗ್ಗೆ ಬಾಯಿ ಮುಕ್ಕುಳಿಸುವುದು, ಕೈ ಮುಖ ತೊಳೆಯುತ್ತಿರುವುದು.
ನಿರೂಪಕ: ತಾವುಗಳು ಪ್ರವೇಶಿಸಿದ ಎಲ್ಲಾ ವ್ಯಕ್ತಿಗಳನ್ನು ಕೊಲ್ಲುತ್ತೀರಾ..?
ಮಿಸ್ಟರ್ ಕೊರೊನಾ: ಖಂಡಿತಾ ಇಲ್ಲ. ಇದು ನನ್ನ ಮೇಲೆ ಕೆಲವು ಮಾಧ್ಯಮಗಳು ಹೊರಿಸಿದ ಒಂದು ಆರೋಪ. ಅವರು ನನ್ನ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿ ಜನರಲ್ಲಿ ಭೀತಿ ಮತ್ತು ಭಯ ಉಂಟು ಮಾಡುತಿದ್ದಾರೆ. ನಾನು ಪ್ರವೇಶಿಸಿದ ಶರೀರದಲ್ಲಿ ನೂರರಲ್ಲಿ ಎಂಬತ್ತು ಮಂದಿಗಳು ಚಿಕಿತ್ಸೆ ಇಲ್ಲದೆಯೇ ವಾಸಿಯಾಗುತ್ತಾರೆ. ಹದಿನೇಳು ಅಥವಾ ಹದಿನೆಂಟು ಮಂದಿಗೆ ಚಿಕಿತ್ಸೆ ಬೇಕಾಗುತ್ತದೆ. ಚಿಕಿತ್ಸೆ ಮಾಡಿದರೆ ಕೂಡಲೇ ಗುಣವಾಗುತ್ತಾರೆ. ನೂರರಲ್ಲಿ ಬರೀ ಎರಡು ಅಥವಾ ಮೂರು ಮಂದಿಯನ್ನು ಕೊಲ್ಲುತ್ತೇನೆ.
ನಿರೂಪಕ: ತಾವುಗಳು ಕೊಲ್ಲುವ ಆ ಮೂರು ಶೇಖಡಾ ವ್ಯಕ್ತಿಗಳು ಯಾರು.?
ಮಿಸ್ಟರ್ ಕೊರೊನಾ: ಅದು ಅರವತ್ತು, ಎಪ್ಪತ್ತು ಪ್ರಾಯ ದಾಟಿ ಮಧುಮೇಹ, ಹೃದಯ ರೋಗ, ಶ್ವಾಸಕೋಶ ತಟಸ್ಥ ಇತ್ಯಾದಿ ಖಾಯಿಲೆಗಳಿಂದ ಬಳಲುತ್ತಿರುವವರು ಹಾಗೆಂದು ಎಲ್ಲರೂ ಅಲ್ಲ.
ನಿರೂಪಕ: ತಾವುಗಳು ಮಕ್ಕಳನ್ನು ಕೊಲ್ಲುತ್ತೀರಾ..?
ಮಿಸ್ಟರ್ ಕೊರೊನಾ: ದೇವರಾಣೆ ಕೊಲ್ಲುವುದಿಲ್ಲ. ನಾನು ಅವರಲ್ಲಿ ಯಾವಾಗಲೂ ದಯೆ ಮತ್ತು ಮಮತೆ ತೋರುತ್ತಿದ್ದೇನೆ. ಕೆಲವು ವಾಟ್ಸಪ್ ಮತ್ತು ಇತರ ಸಾಮಾಜಿಕ ತಾಣಗಳಲ್ಲಿ ಕಾಣುವ ಮಗುವಿನ ಖಾಯಿಲೆಗೂ ನನಗೂ ಯಾವುದೇ ಸಂಬಂಧವಿಲ್ಲ.
ನಿರೂಪಕ: ನೀವು ಇವತ್ತು ಸಂದರ್ಶನದ ನೆನಪಿಗೆ ನಮಗೇನಾದರೂ ಈ ಬಗ್ಗೆ ಉಪದೇಶ ಕೊಡುವಿರಾ.?
ಮಿಸ್ಟರ್ ಕೊರೊನಾ: ಒಕೆ, ಕೊಡುವ. ಮನೆಯಿಂದ ಹೊರಗೆ ಹೋಗಬಾರದು. ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸಬಾರದು. ಆಗಾಗ್ಗೆ ಕೈ ಮತ್ತು ಮುಖ ಚೆನ್ನಾಗಿ ತೊಳೆಯುತ್ತಿರು. ಸೀನುವಾಗ ಮತ್ತು ಕೆಮ್ಮುವಾಗ ಒಂದು ಕರ್ಚೀಫನ್ನು ಮುಖಕ್ಕೆ ಒತ್ತಿ ಇಡು. ನಂತರ ಚೆನ್ನಾಗಿ ತೊಳೆ. ಯಾರಲ್ಲಾದರೂ ಅಗತ್ಯ ಸಂಪರ್ಕ ಬೆಳೆಸಬೇಕಾಗಿ ಬಂದರೆ ಎರಡು ಮೀಟರ್ ಅಂತರ ಇಟ್ಟು ಮಾತನಾಡು. ಯಾರಿಗೂ ಹಸ್ತದಾನ ಮಾಡಬೇಡ. ಮನೆಯಲ್ಲಿ ಯಾವಾಗಲೂ ಶುಚಿತ್ವ ಪಾಲಿಸು. ಟೆಲಿಫೋನ್ ಕೈಪಿಡಿ, ಕಂಪ್ಯೂಟರ್ ಕೀ, ಬೋರ್ಡ್, ಮೇಜು, ಕುರ್ಚಿ ಮುಂತಾದ, ಮನೆಯಲ್ಲಿ ನಿರಂತರ ಸ್ಪರ್ಶವಾಗುವ ಪದರಗಳನ್ನು ಆಗಾಗ್ಗೆ ಬ್ಯಾಕ್ಟೀರಿಯ ಮುಕ್ತವಾಗಲು ಚೆನ್ನಾಗಿ ಶುಚಿ ಮಾಡು.
ನಿರೂಪಕ: ನನ್ನ ಗೌರವಾನ್ವಿತ ಕೊರೋನಾ ಸರ್ ಅವರೇ, ನನಗೆ ನಿಮ್ಮಲ್ಲಿ ಕೇಳಲಿಕ್ಕಿರುವ ಇನ್ನೊಂದು ಸಂಶಯವೇನೆಂದರೆ , ಈ ತನಕ ನಾವು ಪರಸ್ಪರ ಮಾತನಾಡಿದ್ದು ನಿಮ್ಮ ಕೆಡುಕಿನ ಬಗ್ಗೆಯಾಗಿತ್ತು. ಆದರೆ ನಿಮಗೆ ಏನಾದರೂ ಒಳಿತು ಇದೆಯಾ.?
ಮಿಸ್ಟರ್ ಕೊರೊನಾ: ಖಂಡಿತವಾಗಿಯೂ ಇದೆ. ಈ ತನಕ ಮನೆಗೆ ಬಾರದೆ ಬೀದಿ ಬಿಕಾರಿಗಳ ಹಾಗೆ ಸುತ್ತುತ್ತಿರುವವರನ್ನು ಮನೆಗೆ ಬರುವಂತೆ ಮಾಡಿದೆನು. ಒಂದು ಕುಟುಂಬ ಒಂದು ಅನ್ನದ ಟೇಬಲಿನಲ್ಲಿ ಕುಳಿತು ಊಟ ಮಾಡುವಂತೆ ಮಾಡಿದೆನು. ಎಲ್ಲರೂ ಪರಸ್ಪರ ವಿಚಾರ ವಿನಿಮಯ ಮಾಡುವಲ್ಲಿಗೆ ಮುಟ್ಟಿಸಿದೆನು. ಮಾತ್ರವಲ್ಲ ಇಡೀ ಜಗತ್ತನ್ನೇ ಯಾವುದೇ ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣಾ ವೇದಿಕೆಗೂ ಕೂಡ ಮಾಡಲು ಸಾಧ್ಯವಾಗದ ರೂಪದಲ್ಲಿ ಶುಚಿ ಮಾಡಲು ನನಗೆ ಸಾಧ್ಯವಾಯಿತು. ಅದು ಕೂಡ ಮನುಷ್ಯನಿಗೆ ಮಾಡಿಸಲು ಸಾಧ್ಯವಾಗದ್ದನ್ನು ಕೆಲವೇ ದಿನಗಳಲ್ಲಿ ನಾನು ಮಾಡಿಸಿ ನನ್ನ ಗುರಿ ಮುಟ್ಟಿದ್ದೇನೆ ಎಂದರೆ ನನಗೆ ಹೆಮ್ಮೆ. ಅಲ್ಲದೆ ಬೇರೊಂದು ಗಮನಾರ್ಹ ಸಂಗತಿಯೆಂದರೆ, ಜನರಿಗೆ ದೈವ ಭಕ್ತಿ ಜಾಸ್ತಿಯಾಗಿಸುವುದರಲ್ಲೂ ನನ್ನ ಪಾಲಿದೆ ಎಂಬುದರಲ್ಲಿ ಸಂಶಯವಿಲ್ಲ.
ನಿರೂಪಕ: ಕೊನೆಯದಾಗಿ ನನಗೆ ಯಾವ ಸಂದೇಶ ನೀಡುತ್ತೀರಿ.?
ಮಿಸ್ಟರ್ ಕೊರೊನಾ: ಹಾ.. ಇದೆ. ನನ್ನ ಈ ಒಂದು ಪರ್ಯಟನೆ ಮುಗಿಸಿ ನಾನು ವಾಪಾಸಾಗುವ ತನಕ ನೀವ್ಯಾರೂ ಮನೆಯಿಂದ ಹೊರಬರಬಾರದು. ಸೋಂಕು ತಗಲಿದ್ದಲ್ಲಿ ಮನೆಯಲ್ಲೇ ಕುಳಿತು ಚಿಕಿತ್ಸೆ ಮಾಡಿಕೊಳ್ಳಬೇಕು.