ಸಿದ್ದಾಪುರ, ಏ.5: ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವತಿಯಿಂದ 2019-20 ಸಾಲಿನಲ್ಲಿ ವಿಶೇಷಚೇತನರಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಯಿತು ಪಂಚಾಯಿತಿ ವ್ಯಾಪ್ತಿಯ ವಿಶೇಷ ಚೇತನರಿಗೆ ವೈದ್ಯಕೀಯ ವೆಚ್ಚದಡಿಯಲ್ಲಿ ತಲಾ 5 ಸಾವಿರವನ್ನು ಪಂಚಾಯತಿ ಕಚೇರಿಯಲ್ಲಿ ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಪಿ.ಡಿ.ಓ ಅನೀಲ್ ಕುಮಾರ್ ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ 40 ಮಂದಿ ವಿಶೇಷಚೇತನರಿಗೆ ವಿವಿಧ ಯೋಜನೆಯಡಿಯಲ್ಲಿ ಸೌಲಭ್ಯ ಗಳನ್ನು ಒದಗಿಸಿ ಕೊಡಲಾಗಿದೆ ಎಂದರು.
ವಿಶೇಷಚೇತನರ ಶೇ.5ರ ಅನುದಾನದಲ್ಲಿ ವೈದ್ಯಕೀಯ ವೆಚ್ಚಕ್ಕೆಂದು ತಲಾ 5 ಸಾವಿರವನ್ನು ನೀಡಲಾಗಿದೆ ಇದಲ್ಲದೇ ವಿಶೇಷ ಚೇತನರಾದ ಅಭಿಲಾಷ್ ಎಂಬವರ ಮನೆಗೆ ತೆರಳುವ ರಸ್ತೆಯನ್ನು ಉದ್ಯೋಗಖಾತ್ರಿ ಯೋಜನೆ ಯಡಿಯಲ್ಲಿ ರೂ.1 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಹಾಗೂ ನಬೀಸ ಎಂಬವರ ಮನೆಯವರೆಗೆ 14ನೇ ಹಣಕಾಸಿನ ಯೋಜನೆ ಯಡಿಯಲ್ಲಿ ರೂ. 60 ಸಾವಿರ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಮ್ಮ ಸದಸ್ಯರುಗಳಾದ ಜಮೀಲ, ನಳಿನಿ, ಕಾರ್ಯದರ್ಶಿ ರವಿ ಹಾಜರಿದ್ದರು.