ಮಡಿಕೇರಿ, ಏ. 6: ಕೊರೊನಾ ವೈರಸ್ನಿಂದಾಗಿ ದೇಶಾದ್ಯಂತ ಲಾಕ್ಡೌನ್ ವ್ಯವಸ್ಥೆ ಜಾರಿಯಲ್ಲಿದ್ದು, ಕೊಡಗು ಜಿಲ್ಲೆಯಲ್ಲೂ ಮುಂದುವರಿದಿದೆ. ವಾರದಲ್ಲಿ ಮೂರು ದಿವಸಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ನಿಯಮ ಸಡಿಲಿಕೆ ಮಾಡಿರುವುದರಿಂದ ಜನರು ದಿನಸಿ, ಸಾಮಗ್ರಿ, ತರಕಾರಿ ಖರೀದಿಗೆಂದು ನಗರಕ್ಕೆ ಆಗಮಿಸಿದ್ದರು.ಮೂರು ದಿವಸಗಳ ಕಾಲಾವಕಾಶ ಇರುವುದರಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಷ್ಟೇನು ಜನಸಂದಣಿ ಕಂಡುಬರಲಿಲ್ಲ. ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲೂ ತರಕಾರಿ ಮಾರಾಟಕ್ಕೆ ಅವಕಾಶವಿರುವುದರಿಂದ ಜನತೆ ನಿರಾಯಾಸವಾಗಿ ತಮಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿದರು. ಇನ್ನುಳಿದಂತೆ ನಗರದಲ್ಲಿ ಯಾವುದೇ ಜನ-ವಾಹನ ದಟ್ಟಣೆಯಿಲ್ಲದೆ ಮಾಮೂಲಿಯಾಗಿತ್ತು. ಪೊಲೀಸರು ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದುದು ಕಂಡುಬಂತು.
ವಿಶೇಷ ಜಾಗೃತಿಕೊರೊನಾ ಮಹಾಮಾರಿಯ ಬಗ್ಗೆ ವಿಭಿನ್ನ ರೀತಿಯಲ್ಲಿ ಸಾರ್ವಜನಿಕರಲ್ಲಿ ಮಡಿಕೇರಿ ಯೂತ್ ಕಮಿಟಿ ಸದಸ್ಯರು ಜಾಗೃತಿ ಮೂಡಿಸಿದರು.