ಗೋಣಿಕೊಪ್ಪ ವರದಿ, ಏ. 5 : ಬಿಟ್ಟಂಗಾಲ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯಲ್ಲಿ ಜನರಿಗೆ ಸರಿಯಾಗಿ ಪಡಿತರ ವಸ್ತುಗಳು ಸಿಗುತ್ತಿಲ್ಲ. ಆದ್ದರಿಂದ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ಪ್ರಗತಿಪರ ನಾಗರಿಕ ವೇದಿಕೆ ಅಧ್ಯಕ್ಷ ಎಂ. ಕೆ. ಅರವಿಂದ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ನ್ಯಾಯಬೆಲೆ ಅಂಗಡಿ ಸರಿಯಾದ ಸಮಯಕ್ಕೆ ತೆರೆಯದೆ ಜನರನ್ನು ಬೇರೆ ಬೇರೆ ಸಮಯಕ್ಕೆ ಬರುವಂತೆ ಸೂಚಿಸುತ್ತಿದ್ದಾರೆ. ಮತ್ತು ಕಂಪ್ಯೂಟರ್ನಲ್ಲಿ ತಾಂತ್ರಿಕ ದೋಷವಿರುವುದರಿಂದ ಇಂದು ಪಡಿತರ ವಿತರಿಸಲು ಆಗುತ್ತಿಲ್ಲ ಎಂದು ಮತ್ತೊಂದು ದಿನ ಬರುವಂತೆ ಸೂಚಿಸುತ್ತಿದ್ದಾರೆ. ಇದರಿಂದ ಸುಮಾರು 10 - 16 ಕಿ.ಮೀ ದೂರದಿಂದ ಬರುವವರಿಗೆ ತೊಂದರೆಯಾಗುತ್ತಿದ್ದು; ಜಿಲ್ಲಾಡಳಿತ ಗಮನಹರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.