ಮಡಿಕೇರಿ, ಏ. 5: ಕೊರೊನಾ ವೈರಸ್ ಕುರಿತಾಗಿ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಇಲ್ಲಿನ ವೈದ್ಯರುಗಳು ತಾ. 6 ರಿಂದ 11 ರವರೆಗೆ ಸಂಜೆ 5 ಗಂಟೆಗೆ ಮಡಿಕೇರಿ ಆಕಾಶವಾಣಿಯಲ್ಲಿ ನೇರ ಫೋನ್-ಇನ್ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಡಾ. ಮಂಜುನಾಥ್, ಕೊರೊನಾ ವೈರಸ್ ಸಂಬಂಧ ಕೈಗೊಂಡಿರುವ ಕ್ರಮ ಮತ್ತು ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಡಾ. ಪುರಷೋತ್ತಮ್, ಮಕ್ಕಳಲ್ಲಿ ಕೊರೊನಾ ವೈರಸ್‍ಗೆ ಸಂಬಂಧಿಸಿದಂತೆ ಮಾಹಿತಿ ನೀಡಲಿದ್ದಾರೆ. ಡಾ. ರೂಪೇಶ್ ಗೋಪಾಲ್, ಮಾನಸಿಕ ಒತ್ತಡಗಳ ನಿರ್ವಹಣೆ ಕುರಿತು ಮಾಹಿತಿ ನೀಡುವುದು. ಡಾ. ಶಿವರಾಜ್, ಕೊರೊನಾ ಇತಿಹಾಸ, ಹರಡುವ ವಿಧಾನ ಮತ್ತು ಲಕ್ಷಣಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಡಾ. ನರಸಿಂಹ ಬಿ.ಸಿ., ಮುನ್ನೆಚ್ಚರಿಕೆ ಕ್ರಮಗಳು ಹಾಗೂ ತಡೆಗಟ್ಟುವ ವಿಧಾನಗಳ ಬಗ್ಗೆ ಮಾಹಿತಿ ನೀಡುವುದು. ಡಾ. ಸೌಮ್ಯ ಡಿ., ಪ್ರಸೂತಿ ಸಮಯದಲ್ಲಿ ಕೊರೊನಾ ಹರಡದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ಡಾ. ರಾಜೇಶ್ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಕಿಡ್ನಿ ವೈಫಲ್ಯ ಹಾಗೂ ಇನ್ನಿತರ ವಿಶೇಷ ತೊಂದರೆಗಳಿಂದ ಬಳಲುತ್ತಿರುವವರು ಯಾವ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಕುರಿತು ಮಾಹಿತಿ ನೀಡಲಿದ್ದಾರೆ.