ಕುಶಾಲನಗರ, ಏ. 5: ಲಾಕ್ಡೌನ್ ನಡುವೆ ಕೆಲವು ಕಿಡಿಗೇಡಿಗಳು ಸರಕಾರಿ ಆಸ್ಪತ್ರೆಯೊಂದರ ಆವರಣದಲ್ಲಿ ಬೆಂಕಿ ಹಚ್ಚಿದ ಘಟನೆಯಲ್ಲಿ ಗಿಡಮರಗಳು ನಾಶಗೊಂಡ ಘಟನೆ ಸಮೀಪದ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮುಖ್ಯರಸ್ತೆ ಬದಿಯಿರುವ ಸರಕಾರಿ ಪ್ರಾಥಮಿಕ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು ಒಣಗಿ ನಿಂತಿದ್ದ ಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಆವರಣದಲ್ಲಿದ್ದ ಗಿಡಗಳು ಸುಟ್ಟು ಹೋಗಿವೆ.