ನಾಪೆÇೀಕ್ಲು, ಏ. 4: ಕೊರೊನಾ ವೈರಸ್ ಹಿನ್ನೆಲೆ ಸರಕಾರ ಲಾಕ್‍ಡೌನ್‍ಗೆ ಆದೇಶಿಸಿರುವದರಿಂದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಆದುದರಿಂದ ನಾಪೆÇೀಕ್ಲು ವ್ಯಾಪ್ತಿಯ ಎಲ್ಲಾ ಕಟ್ಟಡ ಮಾಲೀಕರು ಒಂದು ತಿಂಗಳ ಬಾಡಿಗೆಯನ್ನು ಕಡಿತಗೊಳಿಸಬೇಕೆಂದು ನಾಪೆÇೀಕ್ಲು ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಕಾರ್ಯದರ್ಶಿ ಮಾಚೆಟ್ಟಿರ ಕುಶು ಕುಶಾಲಪ್ಪ ಮನವಿ ಮಾಡಿದ್ದಾರೆ.
ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿದ ಅವರು, ಕಳೆದ ಎರಡು ವರ್ಷ ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ವ್ಯಾಪಾರಸ್ಥರು ಹೆಚ್ಚಿನ ಕಷ್ಟನಷ್ಟ ಅನುಭವಿಸಿದ್ದಾರೆ. ಈಗ ಸ್ವಲ್ಪ ಚೇತರಿಸಿಕೊಳ್ಳುವ ಸಮಯದಲ್ಲಿ ಬಾಣಲೆಯಿಂದ ಬೆಂಕಿಗೆ ಎಂಬಂತೆ ಕೊರೊನಾ ವೈರಸ್ ಧಾಳಿಯಿಟ್ಟಿದೆ. ಇದರಿಂದ ವ್ಯಾಪಾರಸ್ಥರು ಇನ್ನೂ ಕಂಗಾಲಾಗಿದ್ದಾರೆ ಎಂದು ಹೇಳಿದ ತಮ್ಮಯ್ಯ ಅವರು ನಾನು ಬಾಡಿಗೆಗೆ ನೀಡಿರುವ ಮಳಿಗೆಗಳ ಒಂದು ತಿಂಗಳ ಬಾಡಿಗೆಯನ್ನು ಈಗಾಗಲೇ ಕಡಿತಗೊಳಿಸಿ ದ್ದೇನೆ. ಎಲ್ಲರೂ ಈ ರೀತಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.